
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.23 ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ ನೇಮಿರಾಜ್ ನಾಯ್ಕ್ ಗೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಇದರಿಂದ ಬಹಳ ನಿರೀಕ್ಷೆ ಇಟ್ಟುಕೊಂಡ ಅಭಿಮಾನಿಗಳಲ್ಲಿ ನಿರಾಶೆ ಮೂಡಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನೇಮಿರಾಜ್ ನಾಯ್ಕ್ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ಟಕ್ಕರ್ ಕೊಡಲು ಹೊರಟಿದ್ದಾರೆ. ಈ ಬಾರಿ ಅಭಿಮಾನಿಗಳು ತಮ್ಮ ಸ್ವಾಭಿಮಾನದ ಪ್ರಶ್ನೆಯನ್ನು ಎಂದು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಚುನಾವಣೆ ಖರ್ಚಿಗೆ ದೇಣಿಗೆ ನೀಡುತ್ತಿದ್ದಾರೆ.
ಚುನಾವಣೆಯಲ್ಲಿ ಕೆಲವರು ದುಡ್ಡು ತೆಗೆದುಕೊಂಡು ಓಟು ಹಾಕುವ ಈ ಕಾಲದಲ್ಲಿ ಅಭ್ಯರ್ಥಿಗೆ ದೇಣಿಗೆ ನೀಡಿ ಚುನಾವಣೆ ಮಾಡುವಂತೆ ಪ್ರೋತ್ಸಾಹಿಸುವುದು ನೋಡಿದರೆ ಬಾಚಿಗೊಂಡನಹಳ್ಳಿ ದಿ.ಚನ್ನಬಸವನಗೌಡರ ಚುನಾವಣೆ ನಿಂತ ಸಂದರ್ಭ ನೆನಪಾಗುತ್ತದೆ ಅವರ ಬಳಿ ಹಣ ಇರಲಿಲ್ಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಣವನ್ನು ಸಂಗ್ರಹಿಸಿ ಚುನಾವಣೆ ಎದುರಿಸಿ ಗೆದ್ದು ಬಂದಿದ್ದರು. ಸಂಗ್ರಹಿಸಿದ ಹಣದಲ್ಲಿ ಜಮ ಖರ್ಚು ಮಾಡಿ ಉಳಿದ ಹಣವನ್ನು ತೆಗೆದುಕೊಳ್ಳದೆ ನೊಂದ ಬಡವರಿಗೆ ಆ ಹಣವನ್ನು ಹಂಚಿದರು. ಅವರ ಸರಳ ಮತ್ತು ಪ್ರಮಾಣಿಕತೆ ಇಂದಿಗೂ ಕ್ಷೇತ್ರದಲ್ಲಿ ಮನೆಮಾತಾಗಿದೆ. ಈಗ ಕ್ಷೇತ್ರದಲ್ಲಿ ಆ ಚಿತ್ರಣ ಕಂಡುಬರುತ್ತದೆ. ನೇಮಿರಾಜ್ ಹೋದ ಕಡೆ ಈ ಬೆಳವಣಿಗೆ ಕಂಡು ಬರುತ್ತದೆ. ಇಂದು ಹಳೆ ಊರಿನ ಕಾರ್ಯಕರ್ತ ಚಿತ್ತವಾಡಗಿ ಪ್ರಕಾಶ್ ದೇಣಿಗೆ ನೀಡಿದರು.
ಈ ಜೆಡಿಎಸ್ ಅಭ್ಯರ್ಥಿ ನೇಮಿರಾಜ ನಾಯ್ಕ್ ಮಾತನಾಡಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನಾನಲ್ಲ ನನ್ನ ಅಭಿಮಾನಿಗಳು ಮತ್ತು ನಿಷ್ಠಾವಂತ ಕಾರ್ಯಕರ್ತರು ಅವರೇ ಈ ಚುನಾವಣೆಯನ್ನು ಎದುರಿಸುತ್ತಾರೆ. ಜೊತೆಗೆ ಗೆಲ್ಲಿಸುತ್ತಾರೆ. ಅವರ ಒಂದು ನಿಷ್ಠಾವಂತ ಕೆಲಸಕ್ಕೆ ನಾನು ತಲೆಬಾಗುತ್ತೇನೆ. ನಾನು ಯಾರಿಗೂ ಬಿಜೆಪಿ ಟಿಕೆಟ್ ಕೊಡು ಅಂತ ಹೇಳಿಲ್ಲ. ನಾನು ಒಬ್ಬ ಆಕಾಂಕ್ಷಿಯಾಗಿದ್ದೆ ನನಗೆ ಟಿಕೆಟ್ ಕೊಡಿ ಅಂತ ಕೇಳಿದ್ದೆ. ಆದರೆ ಇಲ್ಲಿ ಕೆಲವರು ಇಲ್ಲಸಲ್ಲದ ಗಾಳಿ ಸುದ್ದಿಗಳನ್ನು ಅಬ್ಬಿಸಿ ದಾರಿ ತಪ್ಪಿಸುತ್ತಿದ್ದಾರೆ. ನಾನು ಟಿಕೆಟ್ ಕೊಡುವಷ್ಟು ದೊಡ್ಡವರಾಗಿ ಬೆಳೆದಿಲ್ಲ. ನನಗೆ ಟಿಕೆಟ್ ಸಿಗುವದಿಲ್ಲ ಇನ್ನು ನಾನು ಯಾರಿಗೆ ಟಿಕೆಟ್ ಕೊಡಿಸಲು ಸಾಧ್ಯ ಎಂದರು
ಈ ಸಂದರ್ಭದಲ್ಲಿ ಮುಖಂಡರಾದ ಹೊಳಗುಂದಿ ಶೇಖರಪ್ಪ, ಬದಾಮಿ ಮೃತ್ಯುಂಜಯ, ಜೆಡಿಎಸ್ ತಾಲೂಕ್ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಜಿ ಎಂ ಜಗದೀಶ್ , ಎಚ್ ಎಂ ವಿಜಯಕುಮಾರ್, ಬ್ಯಾಟಿ ನಾಗರಾಜ್, ರುದ್ರೇಶ್, ಇತರರಿದ್ದರು