ಹಬೋಹಳ್ಳಿ : ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ ಗೆ ದೇಣಿಗೆ ನೀಡುತ್ತಿರುವ ಅಭಿಮಾನಿಗಳು


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.27  ಕ್ಷೇತ್ರದ ಬಿಜೆಪಿ ಟಿಕೆಟ್  ಆಕಾಂಕ್ಷಿಯಾಗಿದ್ದಾನೆ  ನೇಮಿರಾಜ್ ನಾಯ್ಕ್ ಗೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಇದರಿಂದ ಬಹಳ ನಿರೀಕ್ಷೆ ಇಟ್ಟುಕೊಂಡ ಅಭಿಮಾನಿಗಳಲ್ಲಿ ನಿರಾಶೆ ಮೂಡಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನೇಮಿರಾಜ್ ನಾಯ್ಕ್ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ಟಕ್ಕರ್ ಕೊಡಲು ಹೊರಟಿದ್ದಾರೆ.
ಈ ಬಾರಿ ಅಭಿಮಾನಿಗಳು ತಮ್ಮ ಸ್ವಾಭಿಮಾನದ ಪ್ರಶ್ನೆಯನ್ನು ಎಂದು ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಚುನಾವಣೆ ಖರ್ಚಿಗೆ ದೇಣಿಗೆ ನೀಡುತ್ತಿದ್ದಾರೆ.
 ಚುನಾವಣೆಯಲ್ಲಿ ಕೆಲವರು ದುಡ್ಡು ತೆಗೆದುಕೊಂಡು ಓಟು ಹಾಕುವ ಈ ಕಾಲದಲ್ಲಿ ಅಭ್ಯರ್ಥಿಗೆ ದೇಣಿಗೆ ನೀಡಿ ಚುನಾವಣೆ ಮಾಡುವಂತೆ ಪ್ರೋತ್ಸಾಹಿಸುವುದು ನೋಡಿದರೆ ಬಾಚಿಗೊಂಡನಹಳ್ಳಿ ದಿ.ಚನ್ನಬಸವನಗೌಡರ, ವೀರ ಸಂಗಯ್ಯ, ಗವಿಸಿದ್ದಪ್ಪ  ಚುನಾವಣೆ ನಿಂತ ಸಂದರ್ಭ ನೆನಪಾಗುತ್ತದೆ ಅವರ ಬಳಿ ಹಣ ಇರಲಿಲ್ಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಣವನ್ನು ಸಂಗ್ರಹಿಸಿ ಚುನಾವಣೆ ಮಾಡಿದ್ದರು.
 ದಿವಂಗತ ಚನ್ನಬಸನಗೌಡರು 1983 ರಲ್ಲಿ  ಗೆದ್ದು ಬಂದಿದ್ದರು. ಸಂಗ್ರಹಿಸಿದ ಹಣದಲ್ಲಿ ಜಮ ಖರ್ಚು ಮಾಡಿ  ಉಳಿದ ಹಣವನ್ನು ತೆಗೆದುಕೊಳ್ಳದೆ ನೊಂದ ಬಡವರಿಗೆ ಆ ಹಣವನ್ನು ಹಂಚಿದರು. ಅವರ ಸರಳ ಮತ್ತು ಪ್ರಮಾಣಿಕತೆ ಇಂದಿಗೂ ಕ್ಷೇತ್ರದಲ್ಲಿ ಮನೆಮಾತಾಗಿದೆ. ಈಗ ಕ್ಷೇತ್ರದಲ್ಲಿ ಹಣ ಇಲ್ಲ ಎಂಬ ಕಾರಣಕ್ಕೆ ಬಿಜೆಪಿ ಟಿಕೆಟ್ ಕೊಡದೆ ಇದ್ದಾಗ ನೇಮಿರಾಜ್  ನಾಯ್ಕ್ ಅಭಿಮಾನಿಗಳ ತಾಳ್ಮೆಯ ಕಟ್ಟೆ ಹೊಡೆದು ಹೋಗಿ ಸ್ವಾಭಿಮಾನದ ಹೆಸರಲ್ಲಿ ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ. ಇದು ಈಗ ರಾಜ್ಯದಲ್ಲಿ ಸುದ್ದಿಯಾಗುತ್ತಿದೆ. ಕಾರ್ಯಕರ್ತರು ಮತ್ತು ಮತದಾರರು ಮನಸ್ಸು ಮಾಡಿದರೆ ಏನಾದರೂ ಆಗಬಹುದು ಎಂಬುದಕ್ಕೆ ಇದೆ ಉದಾಹರಣೆ