ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.16 ತಾಲೂಕಿನ 21 ಗ್ರಾಮ ಪಂಚಾಯಿತಿಗಳ ಎರಡನೆಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಸಭೆ ಇಲ್ಲಿಯ ಪಂಚಮಸಾಲಿ ಭವನದಲ್ಲಿ ಗುರುವಾರ ನಡೆಯಿತು.
ಜಿಲ್ಲಾಧಿಕಾರಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯನ್ನು ಚೀಟಿ ಎತ್ತುವ ಮೂಲಕ ಪ್ರಕಟಿಸಲಾಯಿತು.
ಹನಸಿ-ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮಾಲವಿ -ಅಧ್ಯಕ್ಷ ಎಸ್ ಸಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ, ದಸಮಾಪುರ- ಅಧ್ಯಕ್ಷ ಎಸ್ ಸಿ ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬೆಣಕಲ್ಲು -ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎಸ್ ಟಿ, ಹಂಪಸಾಗರ- ಅಧ್ಯಕ್ಷಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬನ್ನಿಕಲ್ಲು- ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ ಸಿ ಮಹಿಳೆ, ಮೋರಗೇರಿ -ಅಧ್ಯಕ್ಷ ಎಸ್ ಸಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ, ಸೊನ್ನ -ಅಧ್ಯಕ್ಷ ಎಸ್ ಟಿ ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ತಂಬ್ರಹಳ್ಳಿ -ಎಸ್ ಟಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ ಮರಬ್ಬಿಹಾಳು- ಅಧ್ಯಕ್ಷ ಎಸ್ ಸಿ ಉಪಾಧ್ಯಕ್ಷ ಸಾಮಾನ್ಯ ಮುತ್ತೂರು- ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ ಸಿ ಮಹಿಳೆ, ಬಾಚಿಗೊಂಡನಹಳ್ಳಿ -ಅಧ್ಯಕ್ಷ ಎಸ್ ಸಿ ಉಪಾಧ್ಯಕ್ಷ 2a ಮಹಿಳೆ ಬನ್ನಿಗೋಳು- ಅಧ್ಯಕ್ಷ ಎಸ್ ಸಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ, ಬ್ಯಾಸಗಿದೇರಿ- ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ಸಿ ಮಹಿಳೆ, ಹಲಗಾಪುರ- ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ ಟಿ ಮಹಿಳೆ, ಕಡಲ ಬಾಳು- ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎಸ್ ಸಿ, ಹಂಪಾಪಟ್ಟಣ -ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸಾಮಾನ್ಯ, ಮಾದೂರು- ಅಧ್ಯಕ್ಷಸಾಮಾನ್ಯ ಮಹಿಳೆ ಉಪಾಧ್ಯಕ್ಷ ಎಸ್‍ಸಿ, ನೆಲ್ಕುದ್ರಿ- ಅಧ್ಯಕ್ಷ ಸಾಮಾನ್ಯ ಉಪಾಧ್ಯಕ್ಷ ಎಸ್ ಟಿ ಮಹಿಳೆ, ಗದ್ದಿಕೇರಿ -2 ಎ ಮಹಿಳೆ ಉಪಾಧ್ಯಕ್ಷ ಎಸ್ ಸಿ, ವಲ್ಲಬಾಪುರ- ಅಧ್ಯಕ್ಷ ಎಸ್ ಟಿ ಮಹಿಳೆ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿವೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ತಹಸೀಲ್ದಾರ್ ಚಂದ್ರಶೇಖರ್ ಗಾಳಿ, ತಾ ಪಂ ಇಒ ಪರಮೇಶ್ವರಪ್ಪ , ಗ್ರಾಮ ಪಂಚಾಯತಿಯ ಸದಸ್ಯರು ಪಿಡಿಓ ಮತ್ತು ಕಾರ್ಯದರ್ಶಿಗಳು ತಾಲೂಕಛೇರಿ ಸಿಬ್ಬಂದಿ ಮತ್ತು ಸಭೆಯಲ್ಲಿ ಪಾಲ್ಗೊಂಡಿದ್ದರು