ಹಬೋಹಳ್ಳಿ : ಕ್ಷೇತ್ರದ ಕೆಪಿಸಿಸಿ ಸಂಯೋಜಕರಾಗಿ ಅಕ್ಕಿ ತೋಟೇಶ್  ಆಯ್ಕೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.16 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಕೆಪಿಸಿಸಿ ಸಂಯೋಜಕರಾಗಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಕ್ಕಿ ತೋಟೇಶ್ ಇವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಯ್ಕೆ ಮಾಡುವ ಮೂಲಕ ಪ್ರಮಾಣ ಪತ್ರ ವಿತರಿಸಿದ್ದಾರೆ .
 ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಕಾರ್ಯ ನಿರ್ವಹಿಸುಲು ಹಾಗೂ ಅವರ ಗೆಲುವಿಗಾಗಿ ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಪಕ್ಷ ಬಲವರ್ಧನೆ ಮಾಡುಬೇಕು ಎಂದು ತಿಳಿಸಲಾಗಿದೆ. ಅವರ ಆದೇಶದಂತೆ  ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವ ಮತ್ತು ಮಲವರ್ಧನೆ ಗೊಳ್ಳುವಂತೆ ಶ್ರಮಿಸುತ್ತೇನೆ ಎಂದು ಅಕ್ಕಿ ತೋಟೇಶ್ ತಿಳಿಸಿದರು .