ಹಬೋಹಳ್ಳಿ : ಕ್ಷೇತ್ರದಲ್ಲಿ ಸಮೃದ್ಧ ಮಳೆ ಬೆಳಗಾಗಿ   ಶಾಸಕ ನೇಮಿರಾಜ್ ನಾಯ್ಕ್ ಪಾದಯಾತ್ರೆ     


 ಸಂಜೆವಾಣಿ ವಾರ್ತೆ  
ಹಗರಿಬೊಮ್ಮನಹಳ್ಳಿ. ಮಾ.05  ಬರಗಾಲದಿಂದ  ತತ್ತರಿಸಿರುವ  ರೈತರಿಗೆ  ಕ್ಷೇತ್ರದ ಜನತೆಗೆ ಸುಖ ಶಾಂತಿ ನೆಮ್ಮದಿ ನೆಲೆಸಲಿ ಈ ವರ್ಷ ಮಳೆ ಚೆನ್ನಾಗಿ ಬಂದು ಸಕಲರಿಗೂ ಸಮೃದ್ಧಿ ಯನ್ನು ಆರೋಗ್ಯವನ್ನು ಕರುಣಿಸಿ ಎಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ಪ್ರಾರ್ಥಿಸುತ್ತೇನೆ. ಪರಮ ಪೂಜ್ಯರೊಂದಿಗೆ ಪಾದಯಾತ್ರೆಯ ಮೂಲಕ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ಶ್ರೀ ಪತ್ರಿ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂದಿಪುರದ ಮಹೇಶ್ವರ ಸ್ವಾಮೀಜಿ,ಹಾಲಸ್ವಾಮಿ ಮಠದ ಅಭಿನವ ಹಾಲ ಸಿದ್ದೇಶ್ವರ ಸ್ವಾಮೀಜಿ,ಮತ್ತು ಗದ್ದಿಕೆರೆ ಮಠದ ಚರಂತೇಶ್ವರ ಸ್ವಾಮೀಜಿ ಪೂಜ್ಯರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ  ಶ್ರೀ ಗುರು ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ  ಎಂಬ ಜಯಘೋಷದೊಂದಿಗೆ ಕೊಟ್ಟೂರ ದೊರೆಯೇ ನಿನಗಾರು ಸರಿಯೇ ಸರಿ ಸರಿ ಎಂದವರ ಹಲ್ಲನ್ನು ಮುರಿಯೇ  ಬಹು ಪರಕ್  ಎಂಬ ಉದ್ಘಾರದೊಂದಿಗೆ ಕೊಟ್ಟೂರೇಶ್ವರನ ದರ್ಶನ ಪಡೆಯಲು ಭಾನುವಾರ ರಾತ್ರಿ 8-30 ಸಮಯದಲ್ಲಿ ಪಾದಯಾತ್ರೆ ಕೈಗೊಂಡರು.
ಈ  ಸಂದರ್ಭದಲ್ಲಿ ಪುರಸಭೆ ಸದಸ್ಯರಾದ  ಬಿ.ಗಂಗಾಧರ,ನಾಗರಾಜ ಜನ್ನು,ಜೆಡಿಎಸ್ ಪಕ್ಷದ ಅದ್ಯಕ್ಷ ವೈ ಮಲ್ಲಿಕಾರ್ಜುನ ,ಮುಖಂಡರಾದ ಬನ್ನಿಗೋಳ  ವೆಂಕಣ್ಣ, ರಾಜು ಪಾಟೀಲ್ , ಬಸವ ರೆಡ್ಡಿ , ಅಂಬಣ್ಣ,  ನಾಗಯ್ಯ ಸ್ವಾಮಿ,ನಿವೃತ್ತ  ಶಿಕ್ಷಕ ಕೊಟ್ರೇಶಪ್ಪ,ಅರ್ಚಕ ಕೆ ಕೆ ಬಿ.ಎಂ ಕೊಟ್ರಯ್ಯ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.