ಹಬೋಹಳ್ಳಿ : ಕ್ಷೇತ್ರದಲ್ಲಿ ಬಿರುಸಿನ ಮತದಾನ


ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ.10 ಕ್ಷೇತ್ರದಲ್ಲಿ ಬೆಳಗಿನಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ  ದೃಶ್ಯ ಕಂಡು ಬಂದಿತು.
 ಒಟ್ಟು 252 ಭೂತಗಳಿದ್ದು ಪ್ರತಿಯೊಂದು ಬೂತಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಚುನಾವಣೆಯನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತದೆ. 100 ಮೀಟರ್ ದೂರದಲ್ಲಿ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಪಕ್ಷದ ಕಾರ್ಯಕರ್ತರು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಮತದಾರರಿಗೆ ಹಣ ಹಂಚುವ ಮೂಲಕ ಮತದಾರರಲ್ಲಿ ಅಮಿಷ ಒಡ್ದುತ್ತಿದ್ದರು.
 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ಪ್ರಜಾಪ್ರಭುತ್ವದಲ್ಲಿ ನೀಡಲಾಗಿದ್ದು. ಯುವಕರು ಮತ್ತು ಯುವತಿಯರು ಪ್ರಥಮ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು.
 ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾರರ ಅಂತಿಮ ತೀರ್ಪು ಅಭ್ಯರ್ಥಿಗಳ ಗೆಲುವು ಮತ್ತು ಸೋಲಿನ ಲೆಕ್ಕಚಾರ ನಡೆಯುತ್ತದೆ. ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಕಾಂಗ್ರೆಸ್  ಮೂರು ಪಕ್ಷಗಳು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಭಾರಿ ಜಿದ್ದಾಜಿದ್ದಿನಿಂದ ಕೂಡಿದೆ. ಚುನಾವಣೆಯ ಪ್ರಕ್ರಿಯೆ ಪ್ರಾರಂಭದಿಂದಲೂ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಹಬ್ಬರವಾಗಿತ್ತು. ಮತದಾನದ ಒಂದು ದಿನ ಮುಂಚೆ ಪಕ್ಷದ ಅಭ್ಯರ್ಥಿಗಳು  ಮತದಾರರಿಗೆ ನೋಟು ನೀಡುವ ಮೂಲಕ ಓಟು ಕೇಳುತ್ತಿದ್ದರು. ಇತ್ತೀಚಿಗೆ ಚುನಾವಣೆಗಳಲ್ಲಿ ಮತದಾರರಿಗೆ ಹಣ ಹಂಚುವುದು ಸರ್ವಸಾಮಾನ್ಯವಾಗಿ ಹೋಗಿದೆ. ರಾಜಕಾರಣಿಗಳು ತಾವು ಭ್ರಷ್ಟರಾಗುವ ಜೊತೆಗೆ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಣವನ್ನು ಹೊಳೆಯಂತೆ ಹರಿಸಿ ಗೆದ್ದು ಬರುವ ಇಂತಹ ಜನಪ್ರತಿನಿಧಿಗಳಿಂದ ಏನು ನಿರೀಕ್ಷಿಸಲು ಸಾಧ್ಯ?