
ಉಮಾಪತಿ ಶೆಟ್ಟರ್
ಹಗರಿಬೊಮ್ಮನಹಳ್ಳಿ. ಮೇ.13 ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷ ಗೆಲ್ಲುವ ಮೂಲಕ ಹತ್ತು ವರ್ಷದ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ.
ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಬಿಮಾ ನಾಯ್ಕ್ ಎಂದು ಘೋಷಣೆ ಮಾಡಿತು. ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಕನಸು ಕಾಣುತ್ತಿದ್ದು ಭೀಮನಾಯ್ಕ್ ಗೆ ಮತದಾರರು ಸೋಲಿನ ರುಚಿ ತೋರಿಸುವ ಮೂಲಕ ಕನಸನ್ನು ಭಗ್ನಗೊಳಿಸಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ನೇಮಿರಾಜ್ ನಾಯ್ಕ್ ಗೆ ಕೊನೆಗಳಿಗೆಯಲ್ಲಿ ಟಿಕೆಟ್ ತಪ್ಪಿತು. ಭಾರಿ ನಿರಾಶೆಗೊಂಡ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಭೆ ಸೇರಿಸಿ ನೇಮಿರಾಜ್ ನಾಯ್ಕಗೆ ಬೆಂಬಲವಾಗಿ ನಿಂತು ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಜೆಡಿಎಸ್ ಪಕ್ಷ ಅಥವಾ ಪಕ್ಷೇತರರಾಗಿ ನಿಲ್ಲಬೇಕು ಎಂದು ಒಕ್ಕೇರಿಲಿನಿಂದ ಕೂಗಿದರು. ನೇಮಿರಾಜ್ ನಾಯ್ಕ್ ಪತ್ನಿ ಶ್ರೀಮತಿ ವಾಣಿ ಅಭಿಮಾನಿಗಳ ಬೆಂಬಲ ನೋಡಿ ಕಣ್ಣೀರು ಹಾಕಿ ಸೆರೆಗೊಡ್ಡಿ ಭಿಕ್ಷೆ ಕೇಳಿದರು. ಇದು ಸಾಮಾಜಿಕ ತಾಣದಲ್ಲಿ ಭಾರಿ ಸಂಚಲನವನ್ನು ಮೂಡಿಸಿತ್ತು. ಮತದಾರರ ಮನಸ್ಸು ಕರಗಿತು. ಸ್ವಾಭಿಮಾನದ ಹೆಸರಿನಲ್ಲಿ ಚುನಾವಣೆ ಮಾಡಲು ನಿರ್ಧರಿಸಲಾಯಿತು. ತಡ ಮಾಡದೆ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿ ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿ ಟಿಕೆಟ್ ದಕ್ಕಿಸಿಕೊಂಡು ಬಂದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆ ಭಾಗವಹಿಸಿ ಸಂಪೂರ್ಣ ಬೆಂಬಲ ಸೂಚಿಸಿದರು. ಆಗಲೇ ಕ್ಷೇತ್ರದಲ್ಲಿ ಒಂದು ಸ್ಪಷ್ಟ ಚಿತ್ರಣ ಗೋಚರಿಸಿತು. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲುವ ಸೂಚನೆ ಕಂಡುಬಂದಿತ್ತು. ಪ್ರಚಾರ ಹೋದ ಕಡೆಯಲ್ಲ ಅಭಿಮಾನಿಗಳು ಕಾರ್ಯಕರ್ತರು ಮತದಾರರು ನಮ್ಮ ಕೈಲಾದಷ್ಟು ಸಹಾಯ ಮಾಡಿ ಚುನಾವಣೆಯ ದೇಣಿಗೆಯನ್ನು ನೀಡಿ ಬೆಂಬಲಿಸಿದರು. ಎರಡು ಬಾರಿ ಸೋತಿದ್ದ ನೇಮಿರಾಜ್ ನಾಯ್ಕ್ ಗೆ ಅನುಕಂಪ ಸಿಂಪತಿ ಸುನಾಮಿ ರೀತಿ ಸೃಷ್ಟಿಯಾಯಿತು. ಇಲ್ಲಿ ಅಹಂಕಾರ ದುಡ್ಡಿಗೆ ಪಾಠ ಕಲಿಸಲು ಮತದಾರರು ತೀರ್ಮಾನಿಸಿದಂತಿತ್ತು. ಸರಳ ಮತ್ತು ಎಲ್ಲರೊಂದಿಗೆ ಬೆರೆಯುವ ನೇಮಿರಾಜ್ ನಾಯ್ಕ್ ಎಂಬ ವ್ಯಕ್ತಿ ಬೇಕಾಗಿತ್ತು. ಅದನ್ನೇ ಮತದಾರರು ಆಯ್ಕೆ ಮಾಡಿದ್ದಾರೆ. ಇದು ಕೇವಲ ಒಬ್ಬ ನೇಮಿರಾಜ್ ನಾಯ್ಕ್ ಗೆಲುವು ಅಲ್ಲ ಇದು ಇಡೀ ಕ್ಷೇತ್ರದ ಸ್ವಾಭಿಮಾನದ ಗೆಲುವು. ಹತ್ತು ವರ್ಷದ ಕೆಳಗೆ ಯಾವ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಭೀಮನಾಯ್ಕ್ ಗೆ ಅದೇ ಪಕ್ಷ ಆತನನ್ನು ಸೋಲಿಸುವಂತೆ ಮಾಡಿತು. ಇತಿಹಾಸ ಮರುಕಳಸುತ್ತೆ ಎಂಬುದಕ್ಕೆ ಇದೇ ಉದಾಹರಣೆ.
ಸಾಮಾಜಿಕ ನ್ಯಾಯಾದಡಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಬಲ್ಲವುಣಿಸಿ ರಾಮಣ್ಣ ಕ್ಷೇತ್ರದಲ್ಲಿ ಅಷ್ಟೊಂದು ಚಿರಪರಿಚಿತರಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಬಿಜೆಪಿ ಅಗ್ನಿ ಪರೀಕ್ಷೆಗೆ ಒಡ್ಡಿತ್ತು. ಆದರೆ ಮತದಾರರು ಯಾಕೋ ಮನಸ್ಸು ಮಾಡಿಲ್ಲ.