ಹಬೋಹಳ್ಳಿ :ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.08 ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2023ರ ಸಾಲಿನ ವಹಿವಾಟು ಮತ್ತು ವಸೂಲಾತಿಯಲ್ಲಿ ವಿಜಯನಗರ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಕಳೆದ ಬಾರಿಯೂ ಪ್ರಥಮ ಸ್ಥಾನ ಹೊಂದಿತ್ತು ಎಂದು ಅವಳಿ ಜಿಲ್ಲೆಯ ವ್ಯವಸ್ಥಾಪಕ ಡಿ ಮಂಜುನಾಥ್ ತಿಳಿಸಿದರು.
 ಪಟ್ಟಣದ ಹಳೆ ಊರಿನ ಸಮುದಾಯ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಪಿ ಎಲ್ ಡಿ ಬ್ಯಾಂಕಿನ 2023ರ ಮಹಾಜನಾ ಸಭೆಯ ಉದ್ದೇಶಿಸಿ ಮಾತನಾಡಿ ಬ್ಯಾಂಕಿನ ಸಾಲದ ಕಂತಿನ ಬೇಡಿಕೆ ಇದ್ದು ಅದರಲ್ಲಿ ಸಾಲ ವಸೂಲಾತಿ ಶೇಕಡ  84.75ರಷ್ಟು ಆಗಿದೆ. ಇದು ವಿಜಯನಗರ ಜಿಲ್ಲೆಗೆ  ಪ್ರಥಮ ಸ್ಥಾನ ಪಡೆದಿರುತ್ತದೆ ಎಂದು ಹೇಳಲು ಹರ್ಷವೆನಿಸುತ್ತದೆ. ಶೇಕಡ 6.4 ಮತ್ತು 3 ಬಡ್ಡಿ ದರದಲ್ಲಿ ಸಾಲ ಪಡೆದ ರೈತರು ತಮ್ಮ ಸಾಲದ ಕಂತು ಬಾಕಿಗಳನ್ನು ವಾಯ್ಡಿ ತಾರೀಖಿನೊಳಗೆ ಪಾವತಿಸಿದಲ್ಲಿ ಬಡ್ಡಿ ರಿಯಾಯಿತಿ ದೊರೆಯುತ್ತದೆ ಎಂದರು
ಬ್ಯಾಂಕಿನ ಅಧ್ಯಕ್ಷರಾದ ಬಿ ಗಂಗನ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರು ಮಳೆ ಇಲ್ಲದೆ ಬೆಳೆಯನ್ನು ಬೆಳೆಯಲು ಆಗುತ್ತಿಲ್ಲ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರಿಗೆ ಅನುಕೂಲವಾಗುವ ಬೆಳೆಗಳನ್ನು ಬೆಳೆಯಲು ಸಾಲ ಸೌಲಭ್ಯ ಕಲ್ಪಿಸಲು ಜಿಲ್ಲಾ ಬ್ಯಾಂಕಿನವರು ಹೆಚ್ಚಿನ ಸಹಕಾರ ಬೇಕು ಎಂದರು.
ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಈ ಕೆ ಕೃಷ್ಣಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆ ನಾಗಮ್ಮ ನಿರ್ದೇಶಕರಾದ ಗುರುವಯ್ಯ, ದೇವಿಪ್ರಸಾದ್, ನಿವೃತ್ತ  ಸೈನಿಕ ರಾಮರೆಡ್ಡಿ, ಎಚ್ ಎಮ್, ಮಲ್ಲಯ್ಯ  ಮಾಜಿ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಇತರರಿದ್ದರು

One attachment • Scanned by Gmail