
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಸೆ.14 ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿರುವ ಕನಕ ಭವನದ ಸುತ್ತ ತಡೆಗೋಡೆ ನಿರ್ಮಾಣ ಮಾಡಲು ಕುರುಬ ಸಮುದಾಯದ ಮುಖಂಡರು ಭೂಮಿ ಪೂಜೆ ನೆರವೇರಿಸಿದರು. ನಂತರ ಕುರುಬ ಸಂಘದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ತಡೆಗೋಡೆ ಇಲ್ಲದೆ ಭವನದ ಬೀಗ ಮುರಿದು ದುಷ್ಕರ್ಮಿಗಳು ಇದ್ದ ಬದ್ಧ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ . ಇದಲ್ಲದೆ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಸಮುದಾಯದ ಸಹಕಾರ ನಿರೀಕ್ಷೆಯಲ್ಲಿಟ್ಟುಕೊಂಡು ಕಾಮಗಾರಿ ಆರಂಭಿಸಲಾಗಿದೆ. ಸಮುದಾಯ ಸಹಭಾಗಿತ್ವದಲ್ಲಿ ಸುಮಾರು10 ಲಕ್ಷ ರೂ. ದೇಣಿಗೆ ಸಂಗ್ರಹಿಸಿದರೆ. ಕಾಮಗಾರಿ ಪೂರ್ಣಗೊಳ್ಳು ಬಹುದು ಎಂಬ ನಂಬಿಕೆ ಇದೆ. ಈಗಾಗಲೇ ಹಲವು ಬಾರಿ ರಾಜಕಾರಣಿಗಳು ಅನುದಾನದ ಹುಸಿ ಭರವಸೆ ನೀಡಿ ಸಮುದಾಯವನ್ನು ವಂಚಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಧರ್ಮದರ್ಶಿ ಗೋಣೆಪ್ಪ, ಮುಟಗನಹಳ್ಳಿ ಕೊಟ್ರೇಶ್, ಸೊನ್ನದ ಮಹೇಶ್, ಪ್ರಭಾಕರ ಒಡೆಯರ್ ಕೊಟ್ರಯ್ಯ, ಉಲವತ್ತಿ ವೆಂಕಟೇಶ್ , ಮಧುಸೂದನ್, ದೇವೇಂದ್ರಪ್ಪ, ಜಂಬಣ್ಣ ಹನುಮಂತ, ಡಾಬಾ ರಾಮಣ್ಣ, ತಂಬ್ರಹಳ್ಳಿ ರವಿ, ಮಾರುತಿ, ಮೈಲಾರಿ, ಕೊಟ್ರೇಶ ಇದ್ದರು
One attachment • Scanned by Gmail