ಹಬೋಹಳ್ಳಿ :ಏತ  ನೀರಾವರಿಗಾಗಿ ಪಾದಯಾತ್ರೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.12 ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಾನಮಟ್ಟಿ ಬೆಂಚಿನಕಟ್ಟಿ ಏತಾ ನೀರಾವರಿ  ಹೋರಾಟ ಸಮಿತಿಯಿಂದ ಇಂದು  ಏತ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಚಿಲಗೋಡು ಗ್ರಾಮದಿಂದ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಪಾದಯಾತ್ರೆ ಮಧ್ಯಾಹ್ನ 11ಗಂಟೆಗೆ ಪಟ್ಟಣ ಪ್ರವೇಶಿಸಿತು.
ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಗೋಣಿಬಸಪ್ಪ ಮಾತನಾಡಿ ತುಂಗಭದ್ರಾ ನದಿ ಹಿನ್ನಿರಿನ ಮುಳುಗಡೆ ಪ್ರದೇಶದಿಂದ ಪುನರ್ ವಸತಿ ಪಡೆದಂತ ಗ್ರಾಮಕ್ಕೆ ಸೂಕ್ತ ಪರಿಹಾರವನ್ನು ನೀಡ ಯಥಾ ನೀರಾವರಿ ದೇ ಅಂದಿನ ಸರ್ಕಾರ ವಂಚನೆ ಮಾಡಿದೆ. ಅಲ್ಪ ಸ್ವಲ್ಪ ನಮ್ಮ ಹಿರಿಯರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಹೊಲಗಳು ಮಳೆ ಇಲ್ಲದೆ ಬೆಳೆ ಒಣಗಿ ಹೋಗುತ್ತೇವೆ. ಬೋರವೆಲ್ ಗಳು ಬತ್ತಿ ಹೋಗುತ್ತಿವೆ.ಆದ್ದರಿಂದ ನಮ್ಮ ಜಮೀನಿಗಳಿಗೆ ತುಂಗಭದ್ರಾ ಹಿನ್ನಿರಿನಿಂದ ಏತ ನೀರಾವರಿ ಯೋಜನೆಗಾಗಿ ಸರ್ಕಾರದ ಗಮನಕ್ಕೆ ತರಲು ಪಾದಯಾತ್ರೆ ಕೈಗೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
 ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ, ತಾಲೂಕ ಅಧ್ಯಕ್ಷ ರಾಟಿ ಕಾಳಪ್ಪ, ಸಹಕಾರದರ್ಶಿ ತಂಬ್ರಳ್ಳಿ ರವಿ, ಮುಖಂಡರಾದ ಮಾಬುಸಾಬ್, ಉಮೇಶ, ಸಕ್ರಪ್ಪ ಬಾಣದ, ಒಪ್ಪತ್ತೇಶ್ ಬಣಕಾರ್, ಶಿವಪ್ಪ ಪಂಪಾಪತಿ ಮಲ್ಲಿಕಾರ್ಜುನ ರುದ್ರಗೌಡಜಿ ಪಂ ಮಾಜಿ ಸದಸ್ಯ  ಅಕ್ಕಿ ತೋಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಮುಖಂಡರಾದ ಚಿಲಗೋಡು ಕರಿಯಪ್ಪ ಮಂಜುನಾಥ, ಇತರರಿದ್ದರು

One attachment • Scanned by Gmail