ಹಬೋಹಳ್ಳಿ : ಎಸ್ ಎಸ್ ಎಲ್ ಸಿ ಫಲಿತಾಂಶ ತಾಲೂಕಿಗೆ ಶೇ 93.97


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ 09- ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು ತಾಲೂಕಿನಲ್ಲಿ ಶೇಕಡ 93.97ರಷ್ಟು ಫಲಿತಾಂಶ ಲಭಿಸಿದೆ
 ಒಟ್ಟು 2523 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 2371 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಬಿಇ ಒ  ಎಂ ಸಿ ಆನಂದ್ ತಿಳಿಸಿದ್ದಾರೆ.
 ತಾಲೂಕಿನ 10 ಪ್ರೌಢ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಲಭಿಸಿದೆ. ಪಟ್ಟಣದ ಆದರ್ಶ ವಿದ್ಯಾಲಯದ ಚಂದನ ಬಿಎಂ 612(ಶೇ 97.92) ತಾಲೂಕಿಗೆ ಪ್ರಥಮ, ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯ ಎ ಎಮ್ ಅಕ್ಷತಾ 611(ಶೇ. 97.76 ) ದ್ವಿತೀಯ ಸ್ಥಾನ, ಪ್ರಸಿದ್ಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಲಕ್ಷ್ಮಿ ಕೆ 610 (ಶೇ  97.06 ) ತೃತೀಯ ಸ್ಥಾನ ಪಡೆದಿದ್ದಾರೆ.

One attachment • Scanned by Gmail