ಹಬೋಹಳ್ಳಿ :ಎಸ್ ಎಫ್ ಐ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.26 ಪಟ್ಟಣದ ಅಂಬೇಡ್ಕರ್ ಭವನದಲ್ಲಿ  ಎಸ್ ಎಫ್ ಐ ತಾಲೂಕು ಸಮಿತಿ ನೇತೃತ್ವದಲ್ಲಿ ಶನಿವಾರ ಎಸ್ ಎಫ್ ಐ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿತ್ತು
ಶಿಬಿರವನ್ನು ವಾದ್ಯನುಡಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ ಡಾ.ಅಕ್ಕಿ ಬಸವೇಶ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಅಧ್ಯಯನ ಮಾಡಬೇಕು ವಿದ್ಯಾರ್ಥಿ ನಾಯಕರು ಅದಕ್ಕಿಂತ ಹೆಚ್ಚಿನ ಮಟ್ಟದ ವೈಚಾರಿಕ ಪ್ರಜ್ಞೆಯಿಂದ  ಅಧ್ಯಯನ ನಡೆಸಬೇಕು ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ  ಖಾಸಗಿಕರಣ , ವಿಲೀನಕರಣ , ಸರ್ಕಾರಿ ಶಾಲಾ ಕಾಲೇಜುಗಳ ಕುಂದುಕೊರತೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದಲಾವಣೆ ತರುವಲ್ಲಿ  ಕುಂಟಿತವಾಗುತ್ತದೆ , ಹೊಸದಾಗಿ ಜಾರಿಗೊಳಿಸಿರುವ ಎನ್ಈಪಿ ಯಲ್ಲಿನ ಲೋಪದೋಷಗಳು ಅನೇಕ ಇವೆ. ಇದೆಲ್ಲದರ ವಿರುದ್ಧ ಪ್ರತಿಧ್ವನಿ ಗಟ್ಟಿಗೊಳಿಸಲು ಅಧ್ಯಯನ ಮತ್ತು ಅಧ್ಯಯನ ಶಿಬಿರಗಳು ಅತ್ಯಂತ ಅವಶ್ಯಕವಾಗಿವೆ  ಎಂದರು ,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡ ಬಸವರಾಜ್ ವಹಿಸಿದ್ದರು ಪ್ರಾಸ್ತಾವಿಕವಾಗಿ ಜಯಸೂರ್ಯರವರು ಮಾತನಾಡಿದರು ರಾಜ್ಯ ಅಧ್ಯಕ್ಷರಾದ ಅಮರೇಶ್ ಕಡಗದ್ ರವರು , ಮಲ್ಲಿಕಾರ್ಜುನ ಕೊಠಗಿ , ವಿನೋದರವರು ಶುಭಕೋರಿ ಮಾತನಾಡಿದರು ಶಿವ ರೆಡ್ಡಿ ನಿರೂಪಣೆ ಮಾಡಿದರು ಗೋವಿಂದ ಮತ್ತು ಹನುಮಂತನವರು ಕ್ರಾಂತಿ ಗೀತೆಯನ್ನು ಹಾಡಿದರು ಕಾರ್ಯಕ್ರಮದಲ್ಲಿ ಹರಪನಹಳ್ಳಿ, ಹೊಸಪೇಟೆ ,ಹಡಗಲಿ , ಕೂಡ್ಲಿಗಿ , ಬಳ್ಳಾರಿ ತಾಲೂಕು ಸಮಿತಿಯ ಕಾರ್ಯಕರ್ತರು  ಭಾಗವಹಿಸಿದ್ದರು