ಹಬೋಹಳ್ಳಿ:ಸಮಾಜ ಸೇವೆಗೆ ಒಲಿದ  ಗೌರವ ಡಾಕ್ಟರೇಟ್


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜ.03  ನಗರ ಮತ್ತು ಗ್ರಾಮೀಣಾಭಿವೃದ್ಧಿ  ಅಮ್ಮ ಸಂಸ್ಥೆಯ ಸಂಸ್ಥಾಪಕರು,ಸಮಾಜ ಸೇವಕರು ಹಾಗೂ ವಿಜಯನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಹೆಚ್.ಸಾಹೀರಾ ಬಾನುರವರಿಗೆ ಬೆಂಗಳೂರಿನ ಏಷಿಯಾ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.
ಅಮ್ಮ ಸಂಸ್ಥೆಯನ್ನು ಕಟ್ಟಿಕೊಂಡು ಹಲವು ವರ್ಷಗಳಿಂದ ಅಶಕ್ತರ, ದೀನ, ದಲಿತರ ಹಾಗೂ ಎಲ್ಲಾ ಸಮುದಾಯದ ಮಹಿಳೆಯರ ಏಳ್ಗೆಗಾಗಿ ಸದಾ ಹೋರಾಡುತ್ತಾ ಶ್ರಮಿಸುತ್ತಲೇ ಬಂದಿದ್ದಾರೆ. ಅವರ ಈ ಸಮಾಜ ಸೇವೆಯನ್ನು ನಿತ್ಯ ಕಾಯಕವಾಗಿ ಮಾಡಿಕೊಂಡಿದ್ದಾರೆ. ಇದನ್ನು ಪರಿಗಣಿಸಿ ಅವರಿಗೆ ಈ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ.
 ಪತ್ರಿಕೆಯೊಂದಿಗೆ ಮಾತನಾಡಿ ಸಾಹೀರಾ ಬಾನು ಗ್ರಾಮೀಣ ಭಾಗದಲ್ಲಿ ಹುಟ್ಟಿಬೆಳೆದ ಒಬ್ಬ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯಾಗಿದ್ದರೂ ಸಹ ಸಮಾಜದಲ್ಲಿನ ಎಲ್ಲಾ ಸಮುದಾಯ ವರ್ಗಗಳ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಅವರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಧೃಡರನ್ನಾಗಿಸಲು ಮಹಿಳಾ ಸಬಲೀಕರಣಕ್ಕೆ ತಮ್ಮ ಅಮ್ಮ ಸಂಸ್ಥೆಯ ಸ್ಥಾಪಿಸಿ ನೊಂದ ಜನರಿಗೆ ಆಸರೆಯಾಗಿದ್ದಾರೆ.
    .