ಹಬೋಹಳ್ಳಿಯಲ್ಲಿ ಕುಮಾರಸ್ವಾಮಿ ಪ್ರಚಾರ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ.:ಮೇ.03 ಪಟ್ಟಣದ ಹಳೆ ಊರಿನ ನೀರಾವರಿ ಇಲಾಖೆಯಿಂದ ಗಾಳೆಮ್ಮ ದೇವಸ್ಥಾನದವರೆಗೆ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್  ಪರ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಸಮಯದ ಅಭಾವದಿಂದ ಸೇರಿದ ಜನಸ್ತೋಮ ಉದ್ದೇಶಿಸಿ  ಮಾತನಾಡಿ  ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಸಿಲೆಂಡರ್, ರೈತಪರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ರೈತರ ರಸಗೊಬ್ಬರ ಖರೀದಿಸಲು ಹತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ವೃದ್ಧಾಪ್ಯ ಸಂಧ್ಯಾ ಸುರಕ್ಷಾ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ತಿಂಗಳು ಐದು ಸಾವಿರ ನೀಡಲಾಗುವುದು. ಕ್ಷೇತ್ರದ ಅಭ್ಯರ್ಥಿ ನೇಮಿರಾಜ್ ನಾಯ್ಕ್ ಅವರನ್ನು ಗೆಲ್ಲಿಸಿಕೊಂಡು ಬಂದರೆ   ನಮ್ಮ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡುತ್ತೇವೆ. ಮೇ 18 ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ ಅಂದೇ ನಮ್ಮ ಸರ್ಕಾರ ರಚನೆಯಾಗುತ್ತದೆ. ಕ್ಷೇತ್ರದ ಹಾಲಿ ಶಾಸಕ ಎಸ್ ಭೀಮ ನಾಯ್ಕ್ ದುಡ್ಡಿನ ಆಸೆಗೆ ನಮ್ಮ ಪಕ್ಷಕ್ಕೆ ಮೋಸ ಮಾಡಿ ಹೋಗಿದ್ದಾರೆ ಅಂಥವರಿಗೆ ಸರಿಯಾಗಿ ಪಾಠ ಕಲಿಸಬೇಕು ಈ ಬಾರಿ ಅವರನ್ನು ಮನೆಗೆ ಕಳಿಸುವ ಮೂಲಕ ನೇಮಿರಾಜ್ ನಾಯ್ಕ್ ಅವರನ್ನು ಬಾರಿ ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದರು.
 ಮಾಜಿ ಸಚಿವ ಏನ್ ಎಂ ನಬಿ, ಹರ್ಷವರ್ಧನ್, ತಾಲೂಕ ಅಧ್ಯಕ್ಷ ವೈ ಮಲ್ಲಿಕಾರ್ಜುನ ಜಿಲ್ಲಾಧ್ಯಕ್ಷ  ಕೊಟ್ರೇಶ್, ಮುಖಂಡರಾದ ಬದಾಮಿ ಮೃತ್ಯುಂಜಯ, ಬನ್ನಿ ಗೋಳ್  ವೆಂಕಣ್ಣ, ಕನ್ನಳ್ಳಿ ಚಂದ್ರಶೇಖರ್, ತಿಪ್ಪೇಸ್ವಾಮಿ ವೆಂಕಟೇಶ್, ಗಂಗಾಧರ್ ನಾಗರಾಜ್ ಜನ್ನು, ದೀಪಕ್, ಲಿಂಗರಾಜ್, ಬಸವರಾಜ್, ಸಿದ್ದರಾಜು, ಯಮನೂರಪ್ಪ ಸರ್ದಾರ್, ಜಗದೀಶ್ ಜಿ.ಎಂ, ಬ್ಯಾಟಿ ನಾಗರಾಜ್, ಚಿತ್ತವಾಡಗಿ ಪ್ರಕಾಶ್, ಇತರರಿದ್ದರು. One attachment • Scanned by GmailReplyForward