
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜು.20 ತಾಲೂಕಿನ ಹನಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಉರ್ದು ಶಾಲೆಯ ಒಟ್ಟು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳಾದ ನೋಟ್ ಪುಸ್ತಕ, ಪೆನ್ಸಿಲ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಖಿದ್ಮತ್ ಕಮಿಟಿಯ ಗ್ರಾಮ ಘಟಕದ ಪದಾಧಿಕಾರಿಗಳು ಉಚಿತವಾಗಿ ವಿತರಣೆ ಮಾಡಿದರು.
ಬಳಿಕ ಖಿದ್ಮತ್ ಕಮಿಟಿ ತಾಲೂಕು ಅಧ್ಯಕ್ಷ ಜಂದಿಸಾಬ್ ವಿತರಣೆ ಮಾಡಿ ಮಾತನಾಡಿ, ಇತ್ತೀಚಿಗೆ ಖಾಸಗಿ ಶಾಲೆಗಳು ಸಾಕಷ್ಟು ತಲೆ ಎತ್ತುತ್ತಿವೆ. ಆದರೆ, ಸರ್ಕಾರಿ ಶಾಲೆಗಳನ್ನು ಹಾಗೂ ಅಲ್ಲಿ ಶಿಕ್ಷಣ ಪಡೆಯುತ್ತಿರು ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡುವ ಹಿನ್ನೆಲೆಯಲ್ಲಿ ಸಮಾಜ ಶಾಲೆಯತ್ತ ಚಿತ್ತ ಹರಿಸಬೇಕಿದೆ ಎಂದು ಕರೆ ನೀಡಿದರು.
ಹನಸಿ ಗ್ರಾಮ ಘಟಕದ ಅಧ್ಯಕ್ಷ ಹಸೇನ್ ಶರೀಫ್ ವಿದ್ಯಾರ್ಥಿಗಳನ್ನುದ್ದೇಶಿಸಿ, ಕಲಿಕೆಯ ಸಾಮಥ್ರ್ಯ ಮತ್ತು ಇಚ್ಚೆ ಇದ್ದರೆ, ಸರ್ಕಾರಿ ಶಾಲೆಯಲ್ಲಿಯೂ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ ಎಂದ ಅವರು ಪಾಲಕರು, ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಿಕೊಡಿ ಎಂದು ಕರೆ ನೀಡಿದರು.
ಮುಖಂಡ ಸಿದ್ದೇಶ ಮತ್ತು ಬಿಇಒ ಎಂ.ಸಿ.ಆನಂದ್ ಕಲಿಕಾ ಸಾಮಾಗ್ರಿಗಳ ವಿತರಣೆಗೆ ಶ್ಲಾಘಿಸಿ, ಸಮಾಜ ಸೇವೆ ಮಾಡುವ ಶಕ್ತಿ ಮತ್ತು ಇಚ್ಚೆ ಸಮಾಜ ಸೇವಕರಿಗಿರಬೇಕು ಎಂದರು. ಈ ವೇಳೆ ಖಿದ್ಮತ್ ಕಮಿಟಿಯ ತಾಲೂಕು ಉಪಾಧ್ಯಕ್ಷ ಚಾಂದ್‍ಭಾಷಾ, ಸಹ ಕಾರ್ಯದರ್ಶಿ ಅಬ್ದುಲ್ ರಜಾಕ್, ಗ್ರಾಮ ಘಟಕದ ಗೌರವ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಹೊನ್ನೂರ್ ಅಲಿ, ಕಾರ್ಯದರ್ಶಿ ಡಿ.ಫಕೃದ್ಧೀನ್, ಸಹಕಾರ್ಯದರ್ಶಿ ಟಿ.ಜಿಯಾವುಲ್, ಸಂಘಟನಾ ಕಾರ್ಯದರ್ಶಿ ಶೇಕ್ಷಾವಲಿ, ಖಜಾಂಚಿ ಕೆ.ಮುಸ್ತಾಫ್ ಮತ್ತು ಸದಸ್ಯರು ಹಾಗೂ ಈ ಎರಡು ಶಾಲೆಗಳ ಮುಖ್ಯಶಿಕ್ಷಕರಾದ ರೇವಣಸಿದ್ದಪ್ಪ, ಮೊಹಮದ್ ಜಾಕೀರ್ ಹುಸೇನ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.