ಹಬೋಹಳ್ಳಿ:ಕ್ಷೇತ್ರದ ಮತದಾರರಲ್ಲಿ ಪುರಷಗಿಂತ ಮಹಿಳೆ ಮತದಾರರೆ ಹೆಚ್ಚು |


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜ.08 ಹಬೋಹಳ್ಳಿ ವಿಧಾನ ಸಭಾ ಕ್ಷೇತ್ರ ಮತದಾರರ ಪಟ್ಟಿಯನ್ನು ಚುನಾವಣೆ ಅಧಿಕಾರಿ ಹಾಗೂ ತಹಶಿಲ್ದಾರ್ ಕಾರ್ತಿಕ ಬಿಡುಗಡೆಗೊಳಿಸಿ ತಾಲೂಕಿನಲ್ಲಿ ಒಟ್ಟು 252 ಮತಗಟ್ಟೆಗಳಲ್ಲಿ ಒಟ್ಟು 225395 ಮತದಾರರು ಇದ್ದಾರೆ ಎಂದು ಹೇಳಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 252 ಮತಗಟ್ಟೆಗಳನ್ನು ಮಾಡಲಾಗಿದೆ. ಕ್ಷೇತ್ರದ  ಕೊಟ್ಟೂರಿ ಚಪ್ಪರದಲ್ಲಿ ಗ್ರಾಮದಲ್ಲಿನ ಎರಡು ಮತ ಕೇಂದ್ರಗಳಲ್ಲಿ ಒಂದು ಮತ ಕೇಂಧ್ರವನ್ನು ಮತ್ತೊಂದು ಕೇಂದ್ರಕ್ಕೆ ವಿಲೀನ ಮಾಡಲಾಗಿದೆ.
ಕ್ಷೇತ್ರದಲ್ಲಿ  112518 ಪುರುಷ ಮತದಾರರು ಹಾಗೂ 112855 ಮಹಿಳಾ ಮತದಾರರು ಹಾಗು 22 ತ್ರಿಲಿಂಗ ಮತದಾರರು ಒಟ್ಟು 225395 ಮತದಾರರು ಇದ್ದಾರೆ.  ಈ ಪಟ್ಟಿಯಲ್ಲಿ ಮೃತರ , ಅನೇಕ ದಿನಗಳಿಂದ ವಾಸ ಸ್ಥಳ ಬಿಟ್ಟು ಹೋದ ಹೆಸರುಗಳ್ನು ಕೈಬಿಡಲಾಗಿದೆ. ಮತ್ತು ಹೊಸ ಮತದಾರರನ್ನು ಸೇರ್ಪಡೆ ಸಹ ಮಾಡಲಾಗಿದೆ.ಇನ್ನು ತಮ್ಮ ಹೆಸರಗಳನ್ನು ಸೇರ್ಪಡೆ ಮಾಡಲು ಮತ್ತು ತೆಗೆದು ಹಾಕಲು ಅವಕಾಶವಿದೆ ಅಂತಹವರು ಆನ್‍ಲೈನ್ ಮೂಲಕ ಅರ್ಜೀಗಳನ್ನು ಸಲ್ಲಿಸಬಹುದು. ಈಗಾಗಲೇ ಆಧಾರ ಕಾರ್ಡ್ ಮತ್ತ ಮತದಾರರ ಗುರುತಿನ ಚೀಟಿ ಕ್ಷೇತ್ರದಲ್ಲಿ ಶೇ 85 ರಷ್ಟು ನೊಂದಣಿಯನ್ನು ಮಾಡಿದ್ದೇವೆ.ಇನ್ನು ಕೇವಲ ಶೇ 15 ರಷ್ಟು ಆಧಾರ ಲಿಂಕ್ ಮಾಡಬೇಕಾಗಿದೆ. ಇದನ್ನು ಮಾರ್ಚ ಕೊನೆಯೊಳಗೆ ಮಾಡಿ ಮುಗಿಸುತ್ತೇವೆ ಎಂದರು.
ಎರಡು ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೆ ತಮ್ಮಗೆ ಯಾವ ಕಡೆ ಮತದಾರರ ಪಟ್ಟಿಯಲ್ಲಿ ಇರಬೇಕೆಂದು ಸೂಚನೆಯನ್ನು ನೀಡಿದರೆ ಅಲ್ಲಿ ಅವರ ಹೆಸರನ್ನು ಉಳಿಸಲಾಗುವುದು. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಾನೂನು ಪ್ರಕಾರ ಅಪರಾಧವಾಗಿದೆ.  ಆದ್ದರಿಂದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ತೆಗೆಯಲು ಅವಕಾಶವಿರುವುದರನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಈ ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜೂ, ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಪತ್ರೇಶ ಹಿರೇಮಠ, ಮಾಜಿ ಪುರಸಭೆ ಸದಸ್ಯ ಹಾಗು ಬಿಜೆಪಿ ಮುಖಂಡ ಜೋಗಿ ಹನುಮಂತ, ತಾಲೂಕ ಕಛೇರಿ ಸಿಬ್ಬಂದಿ ಡಿ.ಗೋಪಾಲ,ಶಿರಸ್ತಾರ ಅನ್ನದಾನಶ್ವರಯ್ಯ ಇತರರು ಹಾಜರಿದ್ದರು.