ಹಬೊಹಳ್ಳಿ : ಬೀದಿ ದೀಪ ಅಳವಡಿಸುವಂತೆ ಎಸ್ಎಫ್ ಐ ಮನವಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಡಿ.22 ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ ಎಫ್ ಐ) ತಾಲ್ಲೂಕು ಸಮಿತಿ ವತಿಯಿಂದ ಪಟ್ಟಣದಲ್ಲಿ ಬೀದಿ ದೀಪ ಅಳವಡಿಸುವಂತೆ ಮನವಿ ಸಲ್ಲಿಸಿದರು .
ಎಸ್ ಎಫ್ ಐ  ಮುಖಂಡ ಜಯಸೂರ್ಯ ಮಾತನಾಡಿ  ಸರ್ಕ್ಯೂಟ್ ಹೌಸ್ ಬಳಿಯ ಬಿಸಿಎಂ ಬಾಯ್ಸ್ ಹಾಸ್ಟೆಲ್ ಹತ್ತಿರದ ದಾರಿಯಲ್ಲಿ ಬೀದಿ ಇಲ್ಲಾ  ಸಾರ್ವಜನಿಕರು , ಹಾಸ್ಟೆಲ್ ವಿದ್ಯಾರ್ಥಿಗಳು  ಮತ್ತು ವಿಐಪಿ ಗಳು ಓಡಾಡುವ ಮಾರ್ಗದಲ್ಲಿ ಬೆಳಕು ಇಲ್ಲದಿರುವುದು ಇಲ್ಲಿ ಅನೇಕ ವಿಷ ಜಂತುಗಳ ಕಾಟ ಭಯದ ವಾತಾವರಣದಿಂದ ದೂರ ಮಾಡಲು ತಕ್ಷಣವೇ ಆಡಳಿತ ಅಧಿಕಾರಿಗಳು ಬೀದಿ ದೀಪದ ವ್ಯವಸ್ಥೆ ಮಾಡಿಕೊಡಬೇಕೆಂದರು.
ಪುರಸಭೆ ಮತ್ತು ಜೆಸ್ಕಾಂ ಮುಖ್ಯಾಧಿಕಾರಿಗಳಿಗೆ   ಮನವಿ ಸಲ್ಲಿಸಿದರು .
ಈ ಸಂದರ್ಭದಲ್ಲಿ ಎಸ್ ಎಫ್ ಐ ಸದಸ್ಯರಾದ  ಸೋಮ, ಆನಂದ , ಹುಲಿಗೇಶ್ ,  ಯರಿಸ್ವಾಮಿ , ಸಿದ್ದೇಶ್ , ಶಹಾನ್ ಬಾಷ , ನಾಗರಾಜ್ , ಮೈಲಾರಿ , ಸಂಜಯ್, ನವಿನ್ ಗೌಡ , ಮನೋಜ ,ಇತರರಿದ್ದರು