ಹಬೊಹಳ್ಳಿ, ತಾ.19 ಗ್ರಾ.ಪಂ ಅಭ್ಯರ್ಥಿಗಳ ಆಯ್ಕೆ

ಹಗರಿಬೊಮ್ಮನಹಳ್ಳಿ.ಡಿ.೩೧ ತಾಲೂಕಿನ 19 ಗ್ರಾಮ ಪಂಚಾಯಿತಿ ಚುನಾವಣೆಯ ಎಣಿಕೆ ಕಾರ್ಯ ರಾತ್ರಿ 11 ಗಂಟೆಗೆ ಮುಕ್ತಾಯವಾಗಿದೆ ‌. ಬಾರಿ ಕುತೂಹಲ ಕೆರಳಿಸಿದ್ದ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟಾರೆ ಫಲಿತಾಂಶ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ನಗೆ ಬೀರಿದ್ದಾರೆ . ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಶಾಸಕ ಭೀಮ ನಾಯ್ಕ ಗೆ ಈ ಚುನಾವಣೆ ಮಹತ್ವ ಆಗಿತ್ತು. ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿರುವುದರಿಂದ ಅವರು ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಬಾರಿ ಹಣಾಹಣಿ ಕಂಡಿದ್ದ ಹನಸಿ ಕ್ಷೇತ್ರ ದಿಂದ ಗಂಗಾಧರಯ್ಯ ನಾಲ್ಕನೆಬಾರಿಗೆ ಗೆಲವು. ತಾಲೂಕಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಹನಸಿ ಗ್ರಾಪಂ ನಾಲ್ಕನೇಯ ಕ್ಷೇತ್ರ ದಿಂದ ಹಿರಿಯ ನಾಯಕ ಎಎಂ.ಗಂಗಾಧರಯ್ಯ ನಾಲ್ಕನೆ ಬಾರಿಗೆ ವಿಜಯದ ನಗೆ ಬೀರಿದ್ದಾರೆ.
ಈ ಕ್ಷೇತ್ರದಲ್ಲಿ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಭಾರೀ ಹಣಾಹಣಿಯಲ್ಲಿ ಅಂತಿಮವಾಗಿ ಗಂಗಾಧರಯ್ಯ 251 ಮತಗಳನ್ನು ಗಳಿಸಿ ತಮ್ಮ ಎದುರಾಳಿ ಶಿವಕುಮಾರಗೌಡರನ್ನು 36 ಮತಗಳಿಂದ ಸೋಲಿಸಿದರು. ಪರಾಜಿತ ಅಭ್ಯರ್ಥಿಶಿವಕುಮಾರಗೌಡರಿಗೆ 215 ಮತಗಳು ಹಾಗೂ 14 ಮತಗಳು ತಿರಸ್ಕರಿಸಲ್ಪಟ್ಟವು.
ಗ್ರಾಪಂ ಮೊದಲ ಫಲಿತಾಂಶ ಪ್ರಕಟ. ಅಂಕಸಮುದ್ರದ ಲಲಿತಮ್ಮ ಸೋಮಶೇಖರ ವಿಜಯಶಾಲಿ.
ಗ್ರಾಮಪಂಚಾಯ್ತಿ ಚುನಾವಣೆಯ ಮೊದಲ ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಪಂನ ಅಂಕಸಮುದ್ರ ಒಂದನೇ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹೆಚ್.ಬಿ.ಲಲಿತಮ್ಮ ಸೋಮಶೇಖರ ಇವರು 158 ಮತಗಳನ್ನು ಪಡೆದು ಎದುರಾಳಿ ಕಾವ್ಯರನ್ನು 78 ಮತಗಳ ಅಂತರ ದಿಂದ ಸೋಲಿಸಿ ವಿಜಯದ ನಗೆ ಬೀರಿದ್ದಾರೆ.ಬಿಜೆಹಳ್ಳಿ ಗ್ರಾಪಂ ಅಂಕಸಮುದ್ರ ಕ್ಷೇತ್
ಹೆಚ್.ಬಿ ಲಲಿತಮ್ಮ ಸೋಮಶೇಖರ : 158 ಮತಗಳು.ಕಾವ್ಯ 80 ಮತಗಳು, ಪ್ರೇಮಾ 33 ಮತಗಳು.7 ಮತಗಳು ತಿರಸ್ಕರಿಸಿದ ಮತಗಳಾಗಿವೆ.
ಕಾಂಗ್ರೆಸ್ ನತ್ತ ಮುಖ ಮಾಡಿರುವ ಮರಬ್ಬಿಹಾಳ ಗ್ರಾಪಂ, ಅತ್ಯಧಿಕ ಸ್ಥಾನ ಹೊಂದಿರುವ ಮರಬ್ಬಿಹಾಳು ಗ್ರಾಮಪಂಚಾಯ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುತ್ತಿದ್ದು ಮತ ಏಣಿಕೆ ವೇವ್ ನೋಡ್ತಾಯಿದ್ರೇ ಬಹುತೇಕ ಈ ಪಂಚಾಯ್ತಿ ಕಾಂಗ್ರೆಸ್ ವಶವಾಗುವ ಸಾಧ್ಯತೆ ನಿಚ್ಚಳವಾಗಿದೆ. ಬನ್ನಿಗೋಳ ಗ್ರಾಮ ಪಂಚಾಯತಿ ಅಭ್ಯರ್ಥಿ ಗಡಾದ್ ರೇಣುಕಮ್ಮ 334 ಮತಗಳಿಸಿ ವಿಜೇತರಾಗಿದ್ದಾರೆ. ಸಮೀಪ ಸ್ಪರ್ಧೆ ಪೂಜಾರ್ ಯಶೋದಮ್ಮ 1 ಮತದ ಅಂತರದಿಂದ ಪರಾಭವಗೊಂಡಿದ್ದರು. ಸೋತ ಅಭ್ಯರ್ಥಿ ಒತ್ತಾಯದ ಮೇರೆಗೆ ಮರು ಎಣಿಕೆಯಲ್ಲಿ ಸೋತ ಅಭ್ಯರ್ಥಿ ಎರಡು ಮತಗಳ ಪಡೆಯುವ ಮೂಲಕ ವಿಜೇತರಾದರು. ಎಣಿಗಿ ಗ್ರಾಮ ಪಂಚಾಯಿತಿ ನಜೀರ್ ಸಾಬ್ ತಮ್ಮ ಸಮೀಪ ಸ್ಪರ್ಧಿ ಬಾಬುಸಾಬ್ ವಿರುದ್ಧ 4 ಮತಗಳ ಅಂತರದಿಂದ ವಿಜೇತರಾದರು ಇದನ್ನು ಕೂಡ ಮರು ಎಣಿಕೆಗೆ ಒತ್ತಾಯಿಸಿದರು ಆದರೆ ಅಧಿಕಾರಿಗಳು ತಿರಸ್ಕರಿಸಿದರು.
ಈಗ ಪ್ರಕಟವಾಗಿರುವ ಫಲಿತಾಂಶಗಳೆಲ್ಲವೂ ಕಾಂಗ್ರೆಸ್ ಪರವಾಗಿಯೇ ಬಂದಿದ್ದು ಇಲ್ಲಿ ಬಿಜೆಪಿ ಸಾಧನೆ ನಿರಾಸಾದಾಯಕವಾಗಿದೆ.