ಹಬೊಹಳ್ಳಿ ಟಿಎಪಿಸಿಎಂಎಸ್‍ಗೆ ಅವಿರೋಧ ಆಯ್ಕೆ

ಹಗರಿಬೊಮ್ಮನಹಳ್ಳಿ:ನ.19 ಸ್ಥಳೀಯ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಧರ್ಮರೆಡ್ಡಿ,ಉಪಾಧ್ಯಕ್ಷರಾಗಿ ಬಣಕಾರ ಗೋಣೆಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಇವರನ್ನು ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸತೀಶ್ ಪಾಟೇಲ್ ಪ್ರಕಟಿಸಿದರು.
ಸಂಘದ ನಿರ್ದೇಶಕರಾದ ಬಾದಾಮಿ ಮುತ್ಯುಂಜಯ, ಮೈನಳ್ಳಿ ಕೋಟ್ರೇಶ್, ಯು.ಬಸವರೆಡ್ಡಿ, ಎನ್.ಹಾಲೇಶಿ, ಮಂಜುನಾಥಗೌಡ, ಫ್ರಭಾವತಿ, ಕೆ.ಹನುಮಂತಪ್ಪ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷರಾದ ವೀರೇಶ್ವರ ಸ್ವಾಮಿ, ನಗರ ಘಟಕದ ಅಧ್ಯಕ್ಷ ಜಿ.ಎಂ.ಜಗದೀಶ್, ಮುಖಂಡರಾದ ಭದ್ರವಾಡಿ ಚಂದ್ರಶೇಖರ್,ಕಿನ್ನಾಳ್ ಸುಭಾಷ್, ಪಿ.ರಾಮಲಿಂಗಪ್ಪ, ರಾಜು ಪಾಟೇಲ್, ಹೋಟಲ್ ಸಿದ್ದರಾಜು, ಬಿ.ಜಿ.ಬಡೆಗೇರ್,ಚಿತ್ತವಾಡಿಗಿ ಪ್ರಕಾಶ್, ಜಾತಯ್ಯ, ಶರಣಪ್ಪ, ಮಹಿಳಾ ಘಟಕದ ನಿರ್ಮಾಲ ಬಡೆಗೇರ್, ಉಮಾದೇವಿ ,ಶೋಭಾ ಇತರರಿದ್ದರು.