ಹಬೊಹಳ್ಳಿ: ಉದ್ಯೋಗ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ


ಹಗರಿಬೊಮ್ಮನಹಳ್ಳಿ:ಜ.೧೫ ಅಂಗವಿಕಲರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಶ್ರೇಯೋಭಿವೃದ್ಧಿಗೆ ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ ಸೇವಾ ಮನೋಭಾವನೆಯಿಂದ ಪ್ರಾಮಾಣಿಕ ಕೆಲಸ ಮಾಡುತ್ತಿದೆ ಎಂದು ಅಮ್ಮ ಟ್ರಸ್ಟ್ನ ಅಧ್ಯಕ್ಷೆಯಾದ ಶ್ರೀಮತಿ ಶಾಹೀರಾಬಾನು ಹೇಳಿದರು.
ಪಟ್ಟಣದಲ್ಲಿ ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ (ರಿ) ನಿಂದ ನಡೆಯುವ ಉದ್ಯೋಗ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಮಹಿಳೆಯರಿಗೆ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.ಟ್ರಸ್ಟ್ನಿಂದ ನಡೆಯುವ ಇಂತಹ ತರಬೇತಿ ಸ್ವಾಗತಾರ್ಹವಾಗಿದೆ, ಈ ತರಬೇತಿ ಬಡವರಿಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಮಹಿಳೆಯರು ಇಂತಹ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸಮಾಜದಲ್ಲಿ ಘನತೆ, ಗೌರವದಿಂದ ಸ್ವಾವಲಂಬಿಯಾಗಿ ಬದುಕಬೇಕೆಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿಕೊಂಡು ಮಾತನಾಡಿದ ಚರಂತೇಶ್ವರ ಸ್ವಾಮಿಗಳು, ಇಲ್ಲಿ ಶಿಬಿರಾರ್ಥಿಗಳು ಗಮನವಹಿಸಿ ತರಬೇತಿ ಪಡೆದರೆ ಟ್ರಸ್ಟ್ನವರು ಶ್ರಮವಹಿಸಿ ಉಚಿತವಾಗಿ ನೀಡುತ್ತಿರುವ ಈ ತರಬೇತಿಯ ಉದ್ದೇಶ ಸಾರ್ಥಕವಾಗುತ್ತದೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತರೆದಂದAತೆ ಎಂಬ ಮಾತಿನಂತೆ ಇದರ ಕಲಿಕೆ ನಿಮ್ಮ ಮನೆಯವರಿಗೂ ಕಲಿಸುವುದಷ್ಟೇ ಅಲ್ಲದೇ ನಿಮ್ಮ ಬದುಕಿಗೆ ಭದ್ರತೆಯನ್ನೂ ನೀಡುತ್ತದೆ ಎಂದು ಹೇಳಿದರು.
ಟ್ರಸ್ಟ್ನ ಗೌರವ ಅಧ್ಯಕ್ಷರಾದ ಮಕ್ಕಳ ಮೇಷ್ಟುç ಎಲ್. ರೆಡ್ಡಿನಾಯ್ಕ ಮಾತನಾಡಿ ಅಂಗವಿಕಲರು, ಮಹಿಳೆಯರು, ಮಕ್ಕಳು, ವೃದ್ಧರ ಅವಕಾಶ ಹಕ್ಕುಗಳ ಬಗ್ಗೆ ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ ಹಲವಾರು ಜಾಗೃತಿ ಮೂಡಿಸುವ ಕೆಲಸ ಮಾಡಿದೆ, ಅಲ್ಲದೇ ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅವಕಾಶವಂಚಿತ ಎಲ್ಲಾ ಸಂಕಷ್ಟಪೀಡಿತ ನಿರ್ಗತಿಕ ಬಡಜನರ ಸಮಸ್ಯೆಗಳನ್ನು ಗುರುತಿಸಿ ಸ್ಪಂಧಿಸುವ ಮತ್ತು ನೆರವಾಗುವ ಪ್ರಯತ್ನ ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ತಮ ಕಾರ್ಯಚಟುವಟಿಕೆಗಳನ್ನು ಟ್ರಸ್ಟ್ ಹಮ್ಮಿಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ, ವಿದ್ಯಾರ್ಥಿನಿಯರ ವಸತಿ ನಿಲಯ ಪಾಲಕರಾದ ಶ್ರೀಮತಿ ಐ.ಜಯಮ್ಮ, ಮಾತನಾಡಿದರು.
ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಉಸ್ಮಾನ್‌ಬಾಷ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷರಾದ ಜಿ.ಸರೋಜರವರು ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಶಂಷಾದ್‌ಬೇಗAರವರು ಸ್ವಾಗತ ಮಾಡಿ ವಂದಿಸಿದರು. ಟ್ರಸ್ಟಿಯಾದ ನಿಂಗಮ್ಮ, ತರಬೇತಿದಾರರಾದ ಶ್ರೀಮತಿ ಹುಲಿಗೆಮ್ಮ, ವೀರಣ್ಣ ಕಲ್ಮನಿ, ಒಂಟಿಗೋಡಿ ತಿಂದಪ್ಪ, ಎಂ.ಸೈಫುಲ್ಲಾ, ಚಂದ್ರಶೇಖರಯ್ಯ ಇಟ್ಟಿಗಿ, ಹೆಚ್.ವಿರುಪಾಕ್ಷಿ, ಕೆ.ಹುಲುಗಪ್ಪ ಮತ್ತು ಹೊಲಿಗೆ ತರಬೇತಿ ಪಡೆಯುವ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.