ಹಬೊಹಳ್ಳಿಗೆ ಶರಣು ಶರಣಾರ್ಥಿ ಜಾತಾ

ಹಗರಿಬೊಮ್ಮನಹಳ್ಳಿ.ಏ.೦೧- ಅಖಂಡ ಪಂಚಮಸಾಲಿ ಸಮಾಜದ ಬಾಂಧವರು ಪಾದಯಾತ್ರೆಗೆ ಬೆಂಬಲ ನೀಡಿದಕ್ಕೆ ನಾನು ತುಂಬಾ ಅಬಾರಿಯಾಗಿದ್ದೇನೆ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ವೀರಶೈವ ಪಂಚಮಶಾಲಿ ಜಿಲ್ಲಾಧ್ಯಕ್ಷ ಭದ್ರಾವಾಡಿ ಚಂದ್ರಶೇಖರ್ ಕಚೇರಿಯ ಆವರಣದಲ್ಲಿ ಬುಧುವಾರ ಸಾಯಂಕಾಲ ಹಮ್ಮಿಕೊಳ್ಳಲಾಗಿದ್ದ ಶರಣುಶರಣಾರ್ಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಇತಿಹಾಸದಲ್ಲಿ ಒಬ್ಬ ಧರ್ಮಗುರುಗಳು ಸಾಮಾಜಿಕ ನ್ಯಾಯಕ್ಕಾಗಿ ಪ್ರಪ್ರಥಮ ಪಾದಯಾತ್ರೆ ಅದು ಪಂಚಮಸಾಲಿ ಪಾದಯಾತ್ರೆ ಎಂದರೂ ತಪ್ಪಲ್ಲ ,ರಾಜಧಾನಿಯಲ್ಲಿ ದೊಡ್ಡ ಹೋರಾಟ ಮಾಡಿದ ಕೀರ್ತಿ ವೀರಶೈವ ಪಂಗಡದಲ್ಲಿ ಅದು ಪಂಚಮಸಾಲಿ ಸಮಾಜಕ್ಕೆ ಸಲ್ಲುತ್ತದೆ. ಅಧಿವೇಶನದಲ್ಲಿ ಚರ್ಚೆಯಾಗಿ ಆರು ತಿಂಗಳ ಕಾಲ ಕಾಲಾವಕಾಶ ಕೇಳಿರುವ ಮುಖ್ಯಮಂತ್ರಿಗಳ ಮಾತು ನನಗೆ ಅರ್ಧ ಜಯ ಸಿಕ್ಕಂತಾಗಿದೆ ಎಂದರು.
ರಾಷ್ಟ್ರೀಯ ವೀರಶೈವ ಪಂಚಮಸಾಲಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ ಪಾದಯಾತ್ರೆ ತಾತ್ಕಾಲಿಕವಾಗಿ ಸತ್ಯಾಗ್ರಹವನ್ನು ನಿಲ್ಲಿಸಲಾಗಿದೆ ಹೋರಾಟ ಇನ್ನೂ ಮುಗಿದಿಲ್ಲ ಹೋರಾಟ ಸೆಪ್ಟಂಬರ್ 15ರವರೆಗೆ ಮಾಡಬೇಕಾಗಿತ್ತು ಸರ್ಕಾರಕ್ಕೆ ಗೌರವ ಕೊಟ್ಟು ಸಮಾಜದ ಬಾಂಧವರ ಸಚಿವರಿಗೆ ಗೌರವ ನೀಡಿ ಅವರ ಬರವಸೆ ನಂತರ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಲಾಗಿದೆ ಮುಂದಿನ ದಿನಗಳಲ್ಲಿ ಮೀಸಲಾತಿ ಸಿಗದಿದ್ದರೆ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು ಎಂದರು ಕಾರ್ಯಕ್ರಮದಲ್ಲಿ ಪಾದಯಾತ್ರೆಗೆ ಶ್ರಮಿಸಿದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನರೇಗಲ್ ಕೊಟ್ರೇಶ್, ನೇತಾಜಿ ಗೌಡ,ಹೆಚ್.ಎ. ಕೊಟ್ರೇಶ, ಚಿತ್ತಾವಾಡಿಗಿ ಪ್ರಕಾಶ್, ನಂದಿ ವೀರೇಶ್, ಚೆನ್ನವೀರ, ವೀರೇಶ್ ದಶಮಾಪುರ, ಕಲ್ಲನಗೌಡ ಇತರರು ಇದ್ದರು