ಹಬೆ ತೆಗೆದುಕೊಳ್ಳುವಾಗ ಎಚ್ಚರ ಅಗತ್ಯ

ಮೂಗಿನ ನಾಳಗಳನ್ನುಸ್ವಚ್ಛಗೊಳಿಸಲು ಜನರು ಬಳಸುವ ಸರಳ ಮತ್ತು ಸಾಮಾನ್ಯ ಅಭ್ಯಾಸಗಳಲ್ಲಿ ಹಬೆತೆಗೆದುಕೊಳ್ಳುವಿಕೆ ಒಂದು.

ಶೀತ ಮತ್ತು ಕೆಮ್ಮಿನ ಲಕ್ಷಣಗಳಿಂದ ನಮ್ಮನ್ನುಆರಾಮವಾಗಿಸಲು ಇದು ಬಹಳ ಸಹಾಯ ಮಾಡುತ್ತದೆ. ಕಳೆದ ವರ್ಷದಲ್ಲಿ, ಅನೇಕ ಮಂದಿ ತಮ್ಮಉಸಿರಾಟದ ನಾಳಗಳನ್ನುಸ್ಚಚ್ಛವಾಗಿಡಲು ಮತ್ತುಕೋವಿಡ್ ನಿಂದ ರಕ್ಷಣೆ ಪಡೆಯಲು ನಿಯಮಿತವಾಗಿ ಹಬೆತೆಗೆದುಕೊಳ್ಳುವುದನ್ನು ಪ್ರಾರಂಭಿಸಿದ್ದರು. ಆದರಲ್ಲೂ, ಸಾಧ್ಯವಾದಷ್ಟು ಶೀಘ್ರವಾಗಿ ರೋಗ ನಿವಾರಿಸುವ ಪ್ರಯತ್ನದಲ್ಲಿ ಕೋವಿಡ್ ರೋಗಿಗಳು ಅತಿಯಾಗಿ ಹಬೆ ತೆಗೆದು ಕೊಳ್ಳುತ್ತಿದ್ದಾರೆ.

ಇದು ಕೆಮ್ಮಿನ ಲಕ್ಷಣ ಮತ್ತಷ್ಟುಉಲ್ಬಣಗೊಳ್ಳಲು ಕಾರಣವಾಗುತ್ತದೆ ಅಥವಾಈ ರೋಗಿಗಳಲ್ಲಿ ಗಂಟಲು ಅಥವಾ ಬಾಯಿಹುಣ್ಣುಗಳು ಉಂಟಾಗುವ ಸಾಧ್ಯತೆಯಿದೆ.
ಹಬೆ ತೆಗೆದುಕೊಳ್ಳುವುದರಿಂದ ವೈರಸ್ ಅನ್ನುಕೊಲ್ಲಲು ಸಾಧ್ಯವಿಲ್ಲ. ಆದರೆ ಉಸಿರಾಟದ ಹಾದಿಯಲ್ಲಿ ನಿರ್ಮಾಣವಾಗುವ ಲೋಳೆಯ ರಚನೆಯನ್ನುಸಡಿಲಗೊಳಿಸಲು ಮತ್ತು ಕೆಲವು ಉರಿಯೂತವನ್ನು ಕಡಿಮೆಗೊಳಿಸಲು ಸಹಾಯವಾಗುತ್ತದೆ ಎಂದು ಜನರು ನಂ ಬಿದ್ದಾರೆ.

ಅವರಿಗೆ ಇದು ತಾತ್ಕಾಲಿಕವಾಗಿ ಸ್ವಲ್ಪ ಪರಿಹಾರ ನೀಡುತ್ತದೆ ಆದರೆ ಅತಿಯಾದ ಸೇವನೆ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬಿಸಿಯಾದ ಹಬೆಯಲ್ಲಿಅತಿಯಾಗಿ ಉಸಿರಾಡುವುದು ಬಾಯಿ ಮತ್ತು ಗಂಟಲಿನನೋವಿಗೆ ಕಾರಣವಾಗಬಹುದು ಮತ್ತು ಕೆಮ್ಮುಹೆಚ್ಚಾಗುತ್ತದೆ, ಅಡ್ಡ ಪರಿಣಾಮಗಳಿಂದ ಅವರನ್ನುಅನಗತ್ಯವಾಗಿ ಬಳಲುವಂತೆ ಮಾಡುತ್ತದೆ ಎಂದು ಎಂದು ಆಸ್ಟರ್ ಆಸ್ಪತ್ರೆಯ ಡಾ. ಎಸ್.ಎನ್.ಅರವಿಂದ ಎಚ್ಚರಿಸಿದ್ದಾರೆ. ಹಬೆತೆಗೆದುಕೊಳ್ಳುವಿಕೆಯ ಪ್ರಯೋಜನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂದೇಶಗಳು ಹರಿದಾಡುತ್ತಿವೆ. ಹಬೆತೆಗೆದುಕೊಳ್ಳುವುದರಿಂದ ಕೋವಿಡ್ ತಡೆಗಟ್ಟಬಹುದು ಅಥವಾ ಜಯಿಸಬಹುದು ಎಂದು ಅನೇಕ ಜನರು ನಂಬಿದ್ದಾರೆ. ಆದರೆ ಇದಕ್ಕೆ ಪೂರಕವಾದ ಯಾವುದೇ ಪುರಾವೆಗಳಿಲ್ಲ. ಅಪಘಾತಗಳಿಂದಾಗಿ ಅಥವಾ ತಪ್ಪಾದ ಕ್ರಮದಲ್ಲಿ ಹಬೆತೆಗೆದುಕೊಳ್ಳುವುದರಿಂದ ಉರಿಯುವ ಅಥವಾ ಸುಟ್ಟಗಾಯಗಳಿಂದ ಬಳಲುತ್ತಿರುವ ಅನೇಕ ಪ್ರಕರಣಗಳು ನಡೆದಿವೆ. ಇಂತಹ ಸುಟ್ಟಗಾಯಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತಿವೆ.

ವಾಸ್ತವವಾಗಿ, ಕೆಲವು ಸಂದೇಶಗಳು ನೀಲಗಿರಿಯಂತಹ ಸಾರಯುಕ್ತ ತೈಲಗಳನ್ನು ಹಬೆಯ ನೀರಿಗೆ ಸೇರಿಸಲು ಸಲಹೆ ನೀಡುತ್ತವೆ. ಇದು ಸೆಳೆತಕ್ಕೆ ಮತ್ತಷ್ಟು ದಾರಿಮಾಡಿಕೊಡಬಹುದು. ಸರಿಯಾದಕ್ರಮದಲ್ಲಿಹಬೆತೆಗೆದುಕೊಂಡರೆಆರಾಮನೀಡುತ್ತದೆ, ಆದರೆ ಅದು ಯಾವುದೇ ರೋಗನಿವಾರಕ ಸಾಮರ್ಥ್ಯವನ್ನುಹೊಂದಿಲ್ಲ.
ಅಂಗಡಿಗಳಲ್ಲಿ ಲಭ್ಯವಿರುವ ವಿದ್ಯುತ್‌ಸ್ಟೀಮ್ ಇನ್‌ಹೇಲರ್ ಅನ್ನುಪ್ರಯತ್ನಿಸಿ, ಆದರೆಕಟ್ಟುನಿಟ್ಟಾಗಿ ಪೋಷಕರಮೇಲ್ವಿಚಾರಣೆಯಲ್ಲಿಬಳಸಿ
ಮಕ್ಕಳು ಬಳಸುವಾಗ ಬಿಸಿನೀರು ಚೆಲ್ಲದಂತೆ ವಯಸ್ಕರು ಪರಿಶೀಲಿಸಬೇಕು ಮತ್ತು ಖಚಿತಪಡಿಸಿಕೊಳ್ಳಬೇಕು. ದಿನಕ್ಕೆ ಎರಡುಬಾರಿಗಿಂತ ಹೆಚ್ಚುಪುನರಾವರ್ತಿಸುವುದು ಒಳ್ಳೆಯದಲ್ಲ.