ಹಬೀಬ ಶಿಲ್ಲೇದಾರರಿಗೆ ಕರುನಾಡುಶ್ರೀ ಪ್ರಶಸ್ತಿ

ಚನ್ನಮ್ಮನ ಕಿತ್ತೂರ,ನ6: ಸಮಾಜ ಸೇವಕ ಹಬೀಬ ಶಿಲ್ಲೇದಾರವರಿಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ 2022 ಕರ್ನಾಟಕ ರಕ್ಷಣಾ ವೇದಿಕೆ ಬೈಲಹೊಂಗಲ ಘಟಕ ವತಿಯಿಂದ “ಕರುನಾಡುಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಕನ್ನಡ-ನಾಡು,ನುಡಿ, ನೆಲ-ಜಲ, ಗಡಿಗಳ ಸಮಸ್ಯೆಗೆ ನಾವು ನೀವೆಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆಯಿದೆ. ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪ, ಚನ್ನಮ್ಮ, ಸಂಗೋಳ್ಳಿ ರಾಯಣ್ಣ ಸೇರಿದಂತೆ ಹಲವಾರು ಮಹನೀಯರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.
ಪೋಷಕರು ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಮೂಲಕ ಕನ್ನಡ ಪರಿಚಯಿಸುವ ಕೆಲಸವಾಗಬೇಕು. ವೀರರ ಕ್ರಾಂತಿಯ ನಾಡಾದ ಬೈಲಹೊಂಗಲ ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಗಡಿಯಲ್ಲಿ ಸಮಸ್ಯೆ ಉದ್ಭವವಾದಾಗ ಯಾವುದೇ ಅಪೇಕ್ಷೆಯಿಲ್ಲದೇ ಕೆಲಸ ಮಾಡುವ ವೇದಿಕೆಯಿದ್ದರೆ ಅವು ಕರ್ನಾಟಕ ರಕ್ಷಣಾ ವೇದಿಕೆಗಳು. ಈ ಪ್ರಶಸ್ತಿ ನನಗೆ ದೊರೆಯಬೇಕಾದರೆ ಬಡಜನತೆ ಸೇವೆಯೇ ಕಾರಣ ಎಂದರು.
ಡಾ. ಮಹಾಂತಯ್ಯಾ ಶಾಸ್ತ್ರಿ ಆರಿದ್ರಾ ಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಶ್ರೀಮತಿ ಸವಿತಾ ಅಮರ ಶೆಟ್ಟಿ, ವಿಜಯ ಮೆಟ್ಟಗುಡ್ಡ, ಬಾಬು ಕುಡಸೋಮನ್ನವರ, ಪ್ರೋ. ಸಿ.ಬಿ. ಗಣಾಚಾರಿ, ಕರವೆ ತಾಲೂಕಾಧ್ಯಕ್ಷ ರಾಜು ಬೋಳನ್ನವರ, ಸುನೀಲ ಮರಕುಂಬಿ, ಆನಂದ ಬಡಿಗೇರ, ಶಿವಾನಂದ ಕೋಲಕಾರ, ಸಂತೋಷ ಹುಣಸಿಕಟ್ಟಿ ಉಪಸ್ಥಿತರಿದ್ದರು.