ಹಫ್ತಾ ವಸೂಲಿ ವಿರುದ್ಧ ಆಕ್ರೋಶ

ಮೈಸೂರು:ಏ:09: ಉಪಚುನಾವಣೆಗೆ ಸರ್ಕಾರಿ ಅಧಿಕಾರಿಗಳಿಂದ ಹಫ್ತಾ ವಸೂಲಿ ಮಾಡಲಾಗುತ್ತಿದ್ದು, ಎಂಟು ಮಂತ್ರಿಗಳ ಇಲಾಖೆಗಳಿಂದ 500 ಕೋಟಿ ಹಣವನ್ನು ಸಂಗ್ರಹಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಗಂಭೀರ ಆರೋಪ ಮಾಡಿದ್ದಾರೆ.
ಅಬಕಾರಿ ಅಧಿಕಾರಿಗಳಿಂದ 50 ಲಕ್ಷ, 1 ಕೋಟಿಯವರೆಗೂ ಹಣ ಪಡೆಯಲಾಗುತ್ತಿದೆ. ಈ ವಿಷಯವನ್ನ ನನ್ನ ಆತ್ಮೀಯ ಅಬಕಾರಿ ಡಿಸಿ ಒಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆ ಹಣವನ್ನು ಉಪಚುನಾವಣೆಗೆ ಬಳಸಲಾಗುತ್ತಿದೆ. ಆ ಹಣವನ್ನು ಸರ್ಕಾರಿ ವಾಹನಗಳಲ್ಲೇ ಸಾಗಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ಇದರ ಕುರಿತು ಕ್ರಮ ಕೈಗೊಳ್ಳದಿದ್ದರೆ ಜನರು ಚುನಾವಣಾ ಆಯೋಗದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.