ಹನೂರು: 24 ಗ್ರಾಪಂ ಸದಸ್ಯ ಸ್ಥಾನಕ್ಕೆ ಮತ ಚಲಾವಣೆ

ಹನೂರು, ಡಿ.27: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ – 2020 ಹಿನ್ನೆಲೆ ಹನೂರು ತಾಲ್ಲೂಕಿನಲ್ಲಿ 24 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದೆ.
ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಜರುಗುತ್ತಿದ್ದು. ಒಟ್ಟು 199 ಮತಗಟ್ಟೆಗಳಲ್ಲಿ 198 ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ. 68928 ಪುರುಷರು, 66103 ಮಹಿಳೆಯರು, 9 ಇತರೆ ಒಟ್ಟು 135040
ಮತದಾರರ ಸಂಖ್ಯೆಯಲ್ಲಿ ಇಲ್ಲಿಯವರೆಗೆ
ಪುರುಷ ಮಹಿಳೆ ಸೇರಿದಂತೆ ಒಟ್ಟು 37912 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟಾರೆ ಹನೂರು ತಾಲ್ಲೂಕಿನಲ್ಲಿ ಮಧ್ಯಾಹ್ನ ದವರಗೆ ಕನಿಷ್ಠ 48% ಶೇಕಡಾವಾರು ಮತದಾನವಾಗಿದೆ.
ಹನೂರು ತಾಲ್ಲೂಕಿನಲ್ಲಿ 2 ನೇ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧ ಜಿಲ್ಲಾಡಳಿತ ಸೂಚನೆ ನೀಡಿರುವಂತೆ ಮತಗಟ್ಟೆಗಳಿಗೆ 796 ಸಿಬ್ಬಂದಿಗಳು ಮತಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ನಿಂದ ತಪಾಸಣೆ ನೆಡೆಸಿ, ಸ್ಯಾನಿಟೈಜರ್
ಮಾಡಲಾಗುತ್ತಿದೆ. ಹನೂರು ತಾಲ್ಲೂಕಿನಲ್ಲಿ ಒಟ್ಟು 201 ಮತಗಟ್ಟೆ ಇದ್ದು, ಇದರಲ್ಲಿ 2 ಮತಗಟ್ಟೆಯಲ್ಲಿ ಚುನಾವಣೆ ನಡೆಯದ ಹಿನ್ನಲೆ ಒಟ್ಟು 199 ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣೆ ಕಾರ್ಯ ನೆಡೆಯುತ್ತಿದೆ. ಇದರಲ್ಲಿ ಒಂದು ಮತಗಟ್ಟೆಯಲ್ಲಿ ಮಾತ್ರ ಚುನಾವಣಾ ಸ್ಥಗಿತ ಮಾಹಿತಿ ಬಂದಿದ್ದು.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚುನಾವಣಾ ಕ್ರ.ಸಂ 3 ರ ಪಡಸಲನತ್ತ ಗ್ರಾಮದಲ್ಲಿ ಮತದಾನ ಸ್ಥಗಿತಗೊಳಿಸಿರುವ ಬಗ್ಗೆ ಚುನಾವಣಾಧಿಕಾರಿಗಳು ಪತ್ರ ಬರೆದು ವಿಷಯ ತಿಳಿಸಿದ್ದಾರೆ. ಡಿ.26 ರಂದು ಹಲಗತಂಬಡಿ ಎಂಬ ವ್ಯಕ್ತಿಯು ಅರಣ್ಯ ಪ್ರದೇಶದಲ್ಲಿ ಮೃತ ಪಟ್ಟಿರುವುದರಿಂದ ಆ ಭಾಗದ ಮತದಾರರು ಚುನಾವಣಾ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ. ಈ ಸಂಬಂದ ನೋಡಿಲ್ ಅಧಿಕಾರಿಯವರು ದೂರವಾ
ಣಿ ಮೂಲಕ ತಿಳಿಸಿದ್ದಾರೆ ಎಂದು ಪತ್ರದಲ್ಲಿದೆ.
ಬಿಗಿ ಪೆÇಲೀಸ್ ಬಂದೋಬಸ್ತ್ : ತಾಲ್ಲೂಕಿನ 24 ಗ್ರಾ.ಪಂ ಗಳಲ್ಲಿ 2 ನೇ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಹಿನ್ನಲೆ ಪೆÇಲೀಸ್ ಇಲಾಖೆ ವತಿಯಿಂದ 1 ಡಿವೈಎಸ್ಪಿ, 5 ಇನ್ಸ್ಪೆಕ್ಟರ್, 6 ಸಬ್ ಇನ್ಸ್ಪೆಕ್ಟರ್, 18 ಎ.ಎಸ್.ಐ, 220 ಪೆÇಲೀಸ್ ಸಿಬ್ಬಂದಿಗಳು ಹಾಗೂ 130 ಗೃಹ ರಕ್ಷಕ ದಳ ಒಟ್ಟು 380 ಸಿಬ್ಬಂದಿಗಳನ್ನು ನಿಯೋಜಿಸಲಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.