ಹನೂರು ವಿಧಾನಸಭೆ ಕ್ಷೇತ್ರದಲ್ಲಿ: ಬಿರುಸಿನ ಮತದಾನ

ಹನೂರು: ಮೇ.10:- ವಿಧಾನಸಭಾ ಚುನಾವಣೆ ಯ ಹಿನ್ನಲೆಯಲ್ಲಿ ಮತದಾರರು ಬಿರುಸಿನಿಂದ ಮತದಾನ ಪ್ರಕ್ರಿಯೆಯಲ್ಲಿ ತೊಡಗಿದರು,
ಹನೂರು ಪಟ್ಟಣದ ಬಿ ಎಂ ಜಿ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಮತ್ತು ಆರ್ ಎಸ್ ದೊಡ್ಡಿ ಸರ್ಕಾರಿ ಶಾಲೆಗಳಲ್ಲಿ ಮತ ಗಟ್ಟೆ ಗಳನ್ನು ತೆರೆಯಲಾಗಿತ್ತು,
ಇಂದು ಬೆಳ್ಳಿಗೆ 7ರಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು ಮತದಾರರು ಬಿರುಸಿನಿಂದ ತಮ್ಮ ಮತ ಗಟ್ಟೆ ಗಳಿಗೆ ತೆರಳಿ ಮತವನ್ನು ಚಲಾಯಿಸಿದರು,
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 9ರವರೆಗೆ ಸುಮಾರು 3.91ರಷ್ಟು ಮತಗಳು ಚಲಾವಣೆಯಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ, ಸಾರ್ವತ್ರಿಕ ಚುನಾವಣೆಯ ಮತದಾನಕ್ಕೂ ಮುನ್ನ 18 ವರ್ಷಕ್ಕೆ ಕಾಲಿಡುತ್ತಿರುವ ಯುವ ಮತದಾರರಿಗೆ ಭಾರೀ ಸಂಖ್ಯೆಯಲ್ಲಿ ಮತದಾನ ಮಾಡಲು ಅವಕಾಶ ಸಿಕ್ಕಿದೆ ಚುನಾವಣಾ ಆಯೋಗದ ಶ್ರಮ ಹಾಗೂ ವಿಶೇಷ ಡಿಜಿಟಲ್ ಅಭಿಯಾನದ ಮೂಲಕ ಈ ಪ್ರಕ್ರಿಯೆಗೆ ಮಹತ್ವ ಸಿಕ್ಕಿದೆ.ಯುವ ಮತದಾರ ಯುವಕರು ಬಹಳ ಖುಷಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ತಮ್ಮ ಅತ್ಯಂತ ಶ್ರೇಷ್ಠ ಮತದಾನದ ಹಕ್ಕನ್ನು ಚಲಾಯಸಿದ್ದಾರೆ.
ಇನ್ನೂ ವಿವಿಧ ಪಕ್ಷ ಗಳ ಮುಖಂಡರು ಗಳು ಹಾಗೂ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಗಳ ಪರ ಮತದಾನ ಮಾಡುವಂತೆ ಮತದಾರರನ್ನು ಮನವೊಲಿಸುವ ಪ್ರಸಂಗವೂ ಕಂಡು ಬಂದಿತು.
ಹನೂರು ವಿಧಾನಸಭಾ ಕ್ಷೇತ್ರದ ಕೊಂಗರಹಳ್ಳಿ ಗ್ರಾಮ ಪಂಚಾಯಿತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 51 ರಲ್ಲಿ ಹನೂರು ಬಿಜೆಪಿ ಅಭ್ಯರ್ಥಿ ಡಾಕ್ಟರ್ ಪ್ರೀತನ್ ನಾಗಪ್ಪ ಅವರು ಮತ ಚಲಾಯಿಸಿದರು.
ಕೊಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 51 ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ಮಾಜಿ ಶಾಸಕಿ ಪರಿಮಳ ನಾಗಪ್ಪ, ಬಿಜೆಪಿ ಅಭ್ಯರ್ಥಿ ಡಾಕ್ಟರ್ ಪ್ರೀತಂ ನಾಗಪ್ಪ, ಪತ್ನಿ ಡಾಕ್ಟರ್ ಅಪರ್ಣ, ಹಾಗೂ ಸಹೋದರಿ ಪ್ರಿಯಾಂಕ, ಮತ್ತು ಶ್ರಬೊಂನ್ ಪಟೇಲ್ ಅವರು ಮತ ಚಲಾಯಿಸಿದರು.
ಇದೇವೇಳೆ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಪ್ರೀತನ್ ನಾಗಪ್ಪ ಅವರ ಮಾತನಾಡಿ ಈಗಾಗಲೇ ಕ್ಷೇತ್ರದಿಂದ ಮತದಾರರು ಬೆಳಗ್ಗೆಯಿಂದಲೇ ತಮ್ಮ ಮತಗಟ್ಟೆಗಳಲ್ಲಿ ಮತ್ತೆ ಚಲಾಯಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ ಈ ಬಾರಿ ಜನರ ಆಶೀರ್ವಾದದಿಂದ ಬಿಜೆಪಿ ಎಂಬ ವಿಶ್ವಾಸ ಇದೆ. ಮತದಾರರು ಮತದಾನ ಹಕ್ಕನ್ನು ವ್ಯರ್ಥ ಮಾಡದೆ ತಪ್ಪದೆ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಹನೂರು ಕ್ಷೇತ್ರದ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತೆರಯಲಾದ ಮತಗಟ್ಟೆ 40 ರಲ್ಲಿ ಹನೂರು ಶಾಸಕ ಹಾಗೂ ಅಭ್ಯರ್ಥಿ ಆರ್.ನರೇಂದ್ರ ರಾಜೂಗೌಡ ಕುಟುಂಬ ಸಮೇತ ಆಗಮಿಸಿ ಮತಚಲಾಯಿಸಿದರು. ಪತ್ನಿ ಆಶಾ, ಪುತ್ರಿಯರಾದ ಅಮಿತಾ, ನಿಖಿತಾ ಪುತ್ರ ನವನೀತ್ ಗೌಡ ನರೇಂದ್ರಗೆ ಸಾಥ್ ನೀಡಿದರು.