ಹನೂರು ಗ್ರಾ. ಪಂ.ಚುನಾವಣೆ: ಆರಂಭವಾದ ಮತ ಎಣಿಕೆ-ಬಾರೀ ಜನಸ್ತೋಮ

ಹನೂರು: ತಾಲ್ಲೂಕಿನಲ್ಲಿದ್ದ 24 ಗ್ರಾಮಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ಆರಂಭವಾಗಿದ್ದು,
ತಾಲ್ಲೂಕಿನ ಎರಡು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಿಸಲಾಯಿತು. ಭದ್ರತಾ ಕೊಠಡಿಯಲ್ಲಿ ದ್ದ ಮತಪೆಟ್ಟಿಗೆಗಳನ್ನು ಎಣಿಕೆ ಟೇಬಲ್ ಗಳಿಗೆ ತಂದು ಮತಗಳ ಎಣಿಕೆಯನ್ನು ಪ್ರಾರಂಭಿಸಲಾಯಿತು. ಒಟ್ಟು 2 ಕೇಂದ್ರಗಳಲ್ಲಿ ಮತ ಎಣಿಕೆ ಅಧಿಕಾರಿಗಳು, ಮತ ಎಣಿಕೆ ಟೇಬಲ್‍ಗಳನ್ನು ಬಳಸಿಕೊಂಡು ಮತಗಳ ಎಣಿಕೆ ಆರಂಭಿಸಿದ್ದಾರೆ.
ಫಲಿತಾಂಶ ತಿಳಿಯಲು ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ.
ಮತ ಕೇಂದ್ರಗಳ ಸುತ್ತ ಬಿಗಿ ಪೆÇಲೀಸ್ ಬಂದೋ ಬಸ್ತ್ ಮಾಡಲಾಗಿದೆ.ತಾಲ್ಲೂಕು ಕೇಂದ್ರದಲ್ಲಿರುವ ಕ್ರಿಸ್ತರಾಜಶಾಲೆ ಮತ್ತು ಕಾಲೇಜು ಹಾಗೂ ಜಿವಿ ಗೌಡ ಪದವಿ ಪೂರ್ವ ಕಾಲೇಜಿನ ಸ್ಶ್ರಾಂಗ್ ರೂಮ್‍ನಲ್ಲಿ ಡಿ.27 ರಂದು ಮತ ಪೆಟ್ಟಿಗೆ ಇರಿಸಲಾಗಿತ್ತು. ಇಂದು ಬೆಳಿಗ್ಗೆ ಮತ ಎಣಿಕೆ ಕಾರ್ಯವು ಆರಂಭವಾಗಿದ್ದು ಒಂದು ಸುತ್ತಿನ ಮತ ಎಣಿಕೆಯಲ್ಲಿ ರಾಮಾಪುರ, ಚoಗದರಳ್ಳಿ ಗೆಜ್ಜಲನತ್ತ , ಪೂಜಾರಿ ಬೋವಿ ದೊಡ್ಡಿ ಶಾಗ್ಯದಲ್ಲಿ 1 ನೇ ವಾಡ್9 ಗಾಣಿಗ ಮಂಗಲ ತೊಮಿಯರ್ ಪಾಳ್ಳ,ಬಂಡಳ್ಳಿ 4ನೇ ವಾಡ್9 ಅಜೀಪುರದಲ್ಲಿ ಒಡ್ಡರ ದೊಡ್ಡಿ,ಬಿ.ಎಂ.ಹಳ್ಳಿ, ಸೂಳ್ಳೆ ರಿಪಾಳ್ಳ, ಗಂಗಾ ನದೊಡ್ಡಿ ,ಗೋಪಿನಾಥ o ನ ಮಾರಿ ಕೋಟೆಯ .ಮತ ಎಣಿಕೆ ಮುಗಿದಿದ್ದು ಚುನಾವಣೆ ಅಧಿಕಾರಿಗಳು ಘೋಷಿಸ ಬೇಕು 2 ನೇ ಸುತ್ತಿನ ಮತ ಎಣಿಕೆ ಕಾಯ9 ನಡೆದಿದೆ.
ಹನೂರು ತಾಲ್ಲೂಕಿನಲ್ಲಿ 69705 ಪುರುಷರು, 66766 ಮಹಿಳೆಯರು, 9 ಇತರೆ ಒಟ್ಟು 1,36,480 ಮತದಾರರಿದ್ದು 24 ಗ್ರಾಮ ಪಂಚಾಯಿತಿಗಳ ಪೈಕಿ ಕೌದಳ್ಳಿ ಗ್ರಾ.ಪಂ 3, ದೊಡ್ಡಲಾತ್ತೂರು ಗ್ರಾ.ಪಂ 1, ಶೆಟ್ಟಳ್ಳಿ ಗ್ರಾ.ಪಂ 4, ಚಿಕ್ಕಮಾಲಪುರ ಗ್ರಾ.ಪಂ 1, ಒಟ್ಟು 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದೆ. ಒಟ್ಟು 1126 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ತಾಲ್ಲೂಕಿನಲ್ಲಿ ಉಳಿದ 68,566 ಪುರುಷರು, 65,708 ಮಹಿಳೆಯರು, 9 ಇತರೆ, ಒಟ್ಟು 1,34,283 ಮತದಾರರ ಸಂಖ್ಯೆಯಲ್ಲಿ ಪುರುಷ 56,663, ಮಹಿಳೆ 54,113 ಹಾಗೂ ಇತರೆ 3, ಒಟ್ಟು 1,10,779 ಮತದಾರರು ಮತ ಚಲಾಯಿಸಿದ ಹಿನ್ನಲೆ ಶೇಕಡ 82.50 % ಮತದಾನವಾಗಿತ್ತು.
ಮತ ಎಣಿಕೆ ಕಾರ್ಯ:
ಜಿವಿ ಗೌಡ ಪದವಿ ಪೂರ್ವ ಕಾಲೇಜು ಹಾಗೂ ಕ್ರಿಸ್ತರಾಜ ಶಾಲೆ ಮತ್ತು ಕಾಲೇಜಿನಲ್ಲಿ ಜರುಗುತ್ತಿರುವ ಮತ ಎಣಿಕೆ ಕಾರ್ಯದಲ್ಲಿ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಇನ್ನು ಕೆಲವು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಅಭ್ಯರ್ಥಿಗಳ ಮತ ಎಣಿಕೆ ಕಾರ್ಯ ಪ್ರಗತಿಯಲಿದ್ದು, ಸಂಜೆ ವೇಳೆಯಲ್ಲಿ ಅಂತಿಮ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಹನೂರು ತಾಲ್ಲೂಕಿನಲ್ಲಿ ನೆಡೆಯುತ್ತಿರುವ ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಸುಸೂತ್ರವಾಗಿ ಜರುಗಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು.
ಅಲ್ಲದೆ ಮತ ಎಣಿಕೆ ಕೊಠಡಿಗೆ 100 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಮಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.ಇದರ ಜೊತೆಗೆ ಮೊಬೈಲ್ ಹಾಗೂ ಬೆಂಕಿ ಪೆÇಟ್ಟಣವನ್ನು ನಿಷೇಧಿಸಿದೆ. ಮತ ಎಣಿಕೆ ಕೇಂದ್ರಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಸಂಭ್ರಮ :
ಅತ್ತ ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ನೆಡೆಯುತ್ತಿದ್ದು ಇತ್ತ ಗೆದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಸಂತಸ ವ್ಯಕ್ತಪಡಿಸಿ ಜಯಕಾರ ಘೋಷಣೆಗಳನ್ನು ಕೂಗಿ ಸಂಭ್ರಮಿಸುತ್ತಿದ್ದಾರೆ. ಸೋತವರು ಬಂದ ದಾರಿಗೆ ಶುಂಕವಿಲ್ಲದಂತೆ ಸಪ್ಪ ಮುಖವಾಗಿ ಹಿಂತಿರುಗುತ್ತಿದ್ದಾರೆ.