ಹನೂರಿನ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ ನೀಡಿದ ಪ್ರಕಾಶ್ ರಾಜ್

ಹನೂರು, ಮಾ.26:- ಬಹುಭಾಷÁ ನಟ ಪ್ರಕಾಶ್‍ರಾಜ್‍ತಮ್ಮ ಪಿಆರ್‍ಎಫ್ ಫೌಂಡೇಶನ್ ಮೂಲಕ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆಯಾಗಿ ಕೊಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಿಚ್ಚಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿಷÀ ಪ್ರಸಾದ ದುರಂತ ಸಮಯದಲ್ಲಿ ಗಣನೀಯ ಆರೋಗ್ಯ ಸೇವೆಯನ್ನು ಹೋಲಿ ಕ್ರಾಸ್ ಆಸ್ಪತ್ರೆ ಕೊಟ್ಟಿದೆ, ಗುಡ್ಡಗಾಡು ಪ್ರದೇಶಗಳಿಗೆ ಅನುಕೂಲವಾಗಲೆಂದು ಆಸ್ಪತ್ರೆಗೆ ಆಂಬುಲೆನ್ಸ್ ಕೊಡಲಾಗುತ್ತಿದೆ ಎಂದು ಪ್ರಕಾಶ್‍ರಾಜ್ ತಿಳಿಸಿದ್ದಾರೆ.
ನಮ್ಮ ಆಸ್ಪತ್ರೆಯ ಸೇವೆ ಗುರುತಿಸಿ ಇಂದು ನೀಡಿರುವ ತುರ್ತು ವಾಹನದ ಸದುಪಯೋಗ ಕಾಡಂಚಿನ ಗುಡ್ಡ ಪ್ರದೇಶದ ಜನರಿಗೆ ಸಿಗಲಿದೆ ಜೊತೆಗೆ ಈ ತುರ್ತು ವಾಹನ ನೀಡಿದ ಪ್ರಕಾಶ್ ರೈ ಅವರಿಗೆ ಅಭಿನಂದನೆಗಳು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೆಲಿನಾ ಅಭಿನಂದನೆ ಸಲ್ಲಿಸಿದ್ದಾರೆ.
ಆಂಬುಲೆನ್ಸ್ ಹಸ್ತಾಂತರ ಬೆಂಗಳೂರಿನಲ್ಲಿ ನಡೆದಿದ್ದು ಅರಣ್ಯ ಪ್ರದೇಶಕ್ಕೆ ಅನೂಕುಲವಾಗಲೆಂದು 44 ಪೆÇೀರ್ಸ್ ವಾಹನ ಕೊಡಲಾಗಿದೆ.