ಹನೂರಲ್ಲಿ ಬಿಜೆಪಿ ಮಂಡಲ ಪ್ರಶಿಕ್ಷಣ ಪ್ರಕೋಷ್ಠ ತರಬೇತಿ ಕಾರ್ಯಾಗಾರ ಉದ್ಘಾಟನೆ

ಹನೂರು, ನ.20: ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಪ್ರಶಿಕ್ಷಣ ಪ್ರಕೋಷ್ಠ ತರಬೇತಿಯು ಸಹಕಾರಿಯಾಗಿದೆ ಎಂದು ಡಾ. ಪ್ರೀತನ್ ನಾಗಪ್ಪ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಕಾಮಗೆರೆ ಗ್ರಾಮದ ಮೈರಾಡ ಸಂಸ್ಥೆ ಕಛೇರಿ ಸಭಾಂಗಣದಲ್ಲಿ ಎರಡು ದಿನಗಳು ಹಮ್ಮಿಕೊಂಡಿರುವ ಹನೂರು ಬಿಜೆಪಿ ಮಂಡಲ ಪ್ರಶಿಕ್ಷಣ ಪ್ರಕೋಷ್ಠತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಪಕ್ಷವು ತನ್ನದೇ ತತ್ವ ಸಿದ್ಧಾಂತಗಳನ್ನು ಒಳಗೊಂಡಿದೆ ಇದರಲ್ಲಿನ ಪ್ರತಿಯೊಂದು ವಿಚಾರಗಳು ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಕಾರ್ಯಕರ್ತರು ಸೇವೆಯನ್ನು ಒದಗಿಸುವ ಮೂಲಕ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಪಕ್ಷ ಸಂಘಟನೆಯ ಉದ್ದೇಶಗಳನ್ನು ಕುರಿತು ಬಲಪಡಿಸಲು ಹಲವು ವಿಧಾನವನ್ನು ಅನುಸರಿಸಿ ಸಂಘಟನೆ ಮಾಡಲು ಕಾರ್ಯಕರ್ತರು ಕಾರ್ಯಾಗಾರದ ಮಹತ್ವದ ಬಗ್ಗೆ ತಿಳಿದು ಕೊಳ್ಳಬೇಕು ಎಂದು ತಿಳಿಸಿದರು.
ಇದೆ ವೇಳೆ ಮೈಸೂರು ಬಿಜೆಪಿ ಅಶ್ವಥ್ ನಾರಾಯಣ್ ಬಿಜೆಪಿ ಪಕ್ಷದ ಸಂಘಟನೆಯ ವಿಚಾರ ವಿನಿಮಯಗಳ ಬಗ್ಗೆ ತಿಳಿಸಿದರು.
ಈ ಶಿಬಿರದ ಕಾರ್ಯಾಗಾರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಂದರ್, ದತ್ತೇಶ್ ಕುಮಾರ್, ಬಿ.ಕೆ ಶಿವಕುಮಾರ್, ಮಂಡಲ ಅಧ್ಯಕ್ಷ ನಾಗೇಂದ್ರ ಪ್ರಭು, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ.ಕೊಳ್ಳೇಗಾಲ ತಾಲ್ಲೂಕು ಪಂ. ಅಧ್ಯಕ್ಷ ಸುರೇಶ್, ವಕೀಲರು ರಂಗಸ್ವಾಮಿ, ಲಿಂಗನಾಪುರ ಬಸವರಾಜು, ಸಂಚಾಲಕ ನವೀನ್, ಬಸವರಾಜಪ್ಪ, ಪಾಳ್ಯ ಶಿವಪ್ಪ, ಶೃತಿನಾಗೇಂದ್ರ, ಮೀನಾಕ್ಷಿ, ದೀಪಿಕಾ, ಬಂಡಳ್ಳಿ ನಾಗರಾಜು, ಮಾದೇವ, ಕಣ್ಣೂರು ಶಿವಕುಮಾರ್, ಕೆಬಿ ಮಧು ಸೇರಿದಂತೆ ಹನೂರು ಬಿಜೆಪಿ ವಿವಿಧ ಮೋರ್ಚಾ ಕಾರ್ಯಕರ್ತರು ಇನ್ನಿತರರು ಇದ್ದರು.