ಹನೂರಲ್ಲಿ ಪ್ರಿಯಾಂಕ ಗಾಂಧಿ ಅಬ್ಬರ: ಮಹಿಳಾ ಮತದಾರರಲ್ಲಿ ಮಿಂಚಿನ ಸಂಚಾರ

ಹನೂರು, ಏ.26:- ಜಿಲ್ಲೆಯ ಗುಂಡ್ಲುಪೇಟೆಗೆ ಬಂದು ಅಮಿತ್ ಶಾ ರೋಡ್ ಶೋ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹನೂರಲ್ಲಿ ಬೃಹತ್ ಸಮಾವೇಶ ನಡೆಸಿ ಅಬ್ಬರದ ಪ್ರಚಾರ ನಡೆಸಿದರು.
ಹನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ನರೇಂದ್ರ ಪರ ಪ್ರಚಾರ ನಡೆಸಿದ ಪ್ರಿಯಾಂಕಗಾಂಧಿ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ಗುಡುಗುವ ಮೂಲಕ ಕಾಂಗ್ರೆಸ್ ಮತ ಬುಟ್ಟಿಗೆ ಮತಗಳನ್ನು ಸೇರಿಸುವ ಪ್ರಯತ್ನ ಮಾಡಿದರು.
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಅಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪ್ರಿಯಾಂಕಗಾಂಧಿ ಅಕ್ಷರಶಃ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ಮೂಡಿಸಿದರು, ಜನರಿಗೇ ಪ್ರಶ್ನೆಗಳನ್ನು ಹಾಕುತ್ತಲೇ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಕರ್ನಾಟಕದಲ್ಲಿ ಈಗಿನ ಬಿಜೆಪಿ ಸರ್ಕಾರವು ಸರ್ಕಾರವುಒಂದೂವರೆ ಲಕ್ಷಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ ಪ್ರಿಯಾಂಕ, ಜನರ ಹಣ ಮಂತ್ರಿಗಳು, ನಾಯಕರ ಮನೆ ಸೇರಿದ್ದುಜನರುಇಟ್ಟಿದ್ದ ವಿಶ್ವಾಸ, ನಂಬಿಕೆಗೆ ಬಿಜೆಪಿ ದ್ರೋಹ ಬಗೆದಿದೆ ಎಂದು ಆಕ್ರೋಶ ಹೊರಹಾಕಿದರು.
ಒಂದೂವರೆ ಲಕ್ಷಕೋಟಿ ರೂ.ಗಳು ನನ್ನ ಬಳಿ ಇದ್ದಿದ್ದರೇ 100 ಏಮ್ಸ್ ಆಸ್ಪತ್ರೆ, 177 ಇಎಸ್‍ಐಆಸ್ಪತ್ರೆ, 30 ಸಾವಿರ ಸ್ಮಾರ್ಟ್‍ಕ್ಲಾಸ್, 750 ಕಿಮೀ ಮೆಟ್ರೋ, 2250 ಕಿಮೀ ಎಕ್ಸ್ ಪ್ರೆಸ್ ವೇ, 30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬಹುದಿತ್ತು. ಆದರೆ, ಇಂದು ಆ ಹಣಏನಾಗಿದೆ ಬಿಜೆಪಿ ನಾಯಕರು ಮನೆಯಲ್ಲಿದೆ ಎಂದು ಕಿಡಿಕಾರಿದರು.
ಬಿಜೆಪಿಯವರು ಚುನಾವಣೆಗೂ ಮುನ್ನಒಂದು ಮಾತುಆಡುತ್ತಾರೆ, ಅದಾದ ಬಳಿಕ ಮರೆಯುತ್ತಾರೆ, ನೂರಾರು ಭರವಸೆಕೊಟ್ಟ ಬಿಜೆಪಿ ನಿಮ್ಮ ವಿಶ್ವಾಸ ಉಳಿಸಿಕೊಂಡಿದೆಯ? ದಿನಬಳಕೆ ವಸ್ತುಗಳ ಬೆಲೆ ಕಡಿಮೆಆಗಿದ್ಯಾ..? ನಿಮ್ಮ ಮನೆ ಮುಂದೆಉತ್ತಮರಸ್ತೆಇದೆಯಾ..? ನಿಮಗೆ ಉತ್ತಮಆಸ್ಪತ್ರೆ ಸಿಕ್ಕಿದೆಯಾ..?ಎಂದು ಪ್ರಶ್ನಿಸಿ ಮಹಿಳೆಯರ ಮನಗೆಲ್ಲುವ ಪ್ರಯತ್ನ ಮಾಡಿದರು.
ಮೋದಿ ವಿರುದ್ಧ ವಾಗ್ದಾಳಿ: ದೇಶದ ಪ್ರಧಾನಮಂತ್ರಿ ಅವರಿಗೆಓರ್ವ ಸ್ನೇಹಿತರಿದ್ದಾರೆ- ಅವರ ಹೆಸರುಅದಾನಿ, ದೇಶದರೈತ ದಿನಕ್ಕೆ 27 ರೂ. ಸಂಪಾದಿಸುತ್ತಾನೆ, ಆದರೆ ಪ್ರಧಾನಿ ಸ್ನೇಹಿತ ಅದಾನಿ 16.5 ಲಕ್ಷಕೋಟಿ ದುಡಿಯುತ್ತಿದ್ದಾರೆ, ನೀವು ನಂಬಿಕೆ ಇಟ್ಟುಓಟ್ ಹಾಕಿದಿರಿ, ಗೆಲ್ಲಿಸಿದರಿ ಆದರೆಏನಾಯಿತು..? ನಿಮ್ಮ ನಂಬಿಕೆ ಉಳಿಸಿಕೊಂಡಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಡಬಲ್ ಎಂಜಿನ್ ಸರ್ಕಾರ ಎಂದು ಕೊಂಡ ಬಂದ ಬಿಜೆಪಿ ಸರ್ಕಾರ ಕರ್ನಾಟಕ, ಕನ್ನಡ ಸ್ವಾಭಿಮಾನ, ಸಂಸ್ಕøತಿಯನ್ನು ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ನಮ್ನ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಬೇರೆಬ್ರಾಂಡ್‍ಜೊತೆ ವಿಲೀನ ಮಾಡುವ ಸಂಚು ರೂಪಿಸಿದ್ದಾರೆ, ಇಲ್ಲಿನರೈತರನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಾಲು ಸಾಲು ಭರವಸೆ ಕೊಟ್ಟ ಪ್ರಿಯಾಂಕಾ: ನಾವು ಕೊಟ್ಟ ಮಾತನ್ನುತಪ್ಪದೇ ನುಡಿದಂತೆ ನಡೆದಿದ್ದೇವೆ, ನೀವು ಕೊಟ್ಟ ಮತದಋಣ ತೀರಿಸಿದ್ದೇವೆ, ಅಧಿಕಾರದ ಹಕ್ಕನ್ನು ನಿಮಗೆ ಕೊಟ್ಟಿದ್ದೇವೆ, ಕಾಂಗ್ರೆಸ್ ಅಂದರೆ 100% ರಷ್ಟು ವಿಕಾಸ, ಅಭಿವೃದ್ಧಿ ಮಾಡುತ್ತೇವೆ, ಖಾಲಿ ಇರುವ ಉದ್ಯೋಗಳನ್ನು ತುಂಬುತ್ತೇವೆ, ನಂದಿನಿ ಸಂಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೀವೆ, ಮನೆ ಒಡತಿಗೆ 2000, ನಿರುದ್ಯೋಗಯುವಕರಿಗೆ 1500-3000 ಭತ್ಯೆ, 200 ಯೂನಿಟ್‍ಉಚಿತ ವಿದ್ಯುತ್‍ಕೊಡುತ್ತೇವೆ ವಿಶ್ವಾಸವಿಡಿ ಎಂದರು.
ನಿಮ್ಮ ಮತಕ್ಕಾಗಿ ಈ ಪ್ರಣಾಳಿಕೆ ಸಿದ್ಧಪಡಿಸಿಲ್ಲ, ನಿಮ್ಮ ಕುಟುಂಬದಲ್ಲಿ ನಾನು ಒಬ್ಬಳು ಎಂದು ಭಾವಿಸಿ ನಿಮಗೆ ಉತ್ತಮ ಬದುಕು ಕಟ್ಟಿಕೊಡುವ ಸಲುವಾಗಿ ಈ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಈಗಾಗಲೇ, ರಾಜಾಸ್ಥಾನ, ಚತ್ತೀಸಗಢ, ಹಿಮಾಚಲ ಪ್ರದೇಶದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಮಹಿಳೆಗೆ ಅಪ್ಪುಗೆ- ಕಾರ್ಯಕರ್ತರಿಗೆ ಹಸ್ತಲಾಘವ : ಮಹಿಳೆಯರ ಜೊತೆ ಪ್ರಿಯಾಂಕ ಸಂವಾದ- ಇಂದಿರಾ ಪ್ರತಿರೂಪ ಎಂದಾಕೆಯನ್ನು ಅಪ್ಪಿದ ಪ್ರಿಯಾಂಕಾ ಗಾಂಧಿ ಸಮಾವೇಶದ ಬಳಿಕ ಬೇಡಗಂಪಣ ಮತ್ತು ಸೋಲಿಗ ಮಹಿಳೆಯರ ಜೊತೆ ಸಂವಾದ ನಡೆಸಿದರು. ನಮ್ಮ ಸರ್ಕಾರ ಬರಲಿದೆ, ಎಲ್ಲ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.
ಹನೂರು ತಾಲೂಕಿನ ಹೊಸಪೆÇೀಡು ಗ್ರಾಮದ ತಿರುಮಮ್ಮ ಎಂಬವರು, ಇಂದಿರಾ ಗಾಂಧಿ ಅವರ ಕಾಲದಲ್ಲಿ ನಮಗೆ ಸೌಲಭ್ಯಗಳು ಸಿಕ್ಕಿದವು, ನೀವು ಇಂದಿರಾ ಪ್ರತಿರೂಪದಂತೆ ಇದ್ದೀರಿ, ನಮ್ಕ ಸಮಸ್ಯೆಗಳನ್ನು ಪರಿಹರಿಸಿ ಎಂದು ಹೇಳಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದು ಬಂದು ತಿರುಮಮ್ಮನು ಅಪ್ಪಿಕೊಂಡರು.
ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯೂ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲೂ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಡೆಸಿ ಗಮನ ಸೆಳೆದರು.
ಇನ್ನು, ಇಂದಿನ ಸಮಾವೇಶದಲ್ಲಿ 10-12 ಸಾವಿರದಷ್ಟು ಮಂದಿ ಮಹಿಳೆಯರು ಭಾಗಿಯಾಗಿದ್ದರು. ಭಾಷಣದ ಕೊನೆಯಲ್ಲಿ ಜನರ ಕೈಯಲ್ಲಿ ಜೈ ಕರ್ನಾಟಕ ಎಂದು ಹೇಳಿಸಿದ್ದು ವಿಶೇಷವಾಗಿತ್ತು, ಮೋದಿ- μÁ ಅಬ್ಬರದಲ್ಲಿ ಕಾಂಗ್ರೆಸ್‍ನ ನಾಯಕಿ ಹೆಚ್ಚು ಮಿಂಚುತ್ತಿದ್ದು ಇಂದಿನ ಚುನಾವಣಾ ಪ್ರಚಾರ ಕೈ ಕಾರ್ಯಕರ್ತರಲ್ಲಿ ಗೆಲ್ಲುವ ಜೋಶ್ ತಂದುಕೊಟ್ಟಿತು.
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜಿವಾಲ, ಶಾಸಕ ನರೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಇತರರು ಇದ್ದರು.