ಹನುಮಾನ ದೇವ ಮಂದಿರದ ಲೋಕಾರ್ಪಣೆ

ಕಲಬುರಗಿ:ಜೂ.13: ನಗರದ ಸರಫ ಬಜಾರದಲ್ಲಿ ಶ್ರೀ ಭಾರತೀಯ ಗಣೇಶ ಮಂದಿರ ಸರಫ ಸಂಘದ ವತಿಯಿಂದ ನೂತವಾಗಿ ನವಿಕರಿಸಲ್ಪಟ್ಟ ಶ್ರೀ ಸುವರ್ಣ ಹನುಮಾನ ದೇವ ಮಂದಿರ ಸುಂದರ ಶಿಕ್ಷಕಲೆಯ ಭವ್ಯ ಶಿಲಾ ಮಂದಿರದ ಲೋಕಾರ್ಪಣೆ, ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಸುವರ್ಣ ಕಳಸಾರೋಹಣ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸಮಾರಂಭ ಹಮ್ಮಿಕೋಳಲಾಯಿತು.

ಈ ಸಂದರ್ಭದಲ್ಲಿ ರಾಂಘವೇಂದ್ರ ಮೈಲಾಪೂರ, ನಾಗೇಂದ್ರಪ್ಪಾ ಪಾಟೀಲ, ದತ್ತಾತ್ರೇಯ ಮೈಲಾಪೂರ, ಕೇಶವ ಸೀತನೂರ, ವೆಂಕಟೇಶ ಅಮ್ಮಣ ಸೇರಿದಂತೆ ಸರಫ ಬಜಾರದ ಎಲ್ಲಾ ಸದಸ್ಯರು, ಅವರ ಕುಟುಂಬ ಪರಿವಾರ, ಬಡಾವಣೆಯ ಮಹಿಳೆಯರು, ಮುಖಂಡರು ಇದ್ದರು.