ಹನುಮಾನ ಜಯಂತಿ, ರಥೋತ್ಸವ 6 ರಂದು

ಕಲಬುರಗಿ,ಏ.3-ನಗರದ ಬ್ರಹ್ಮಪುರ ಬಡಾವಣೆಯ ಗಂಗಾನಗರದಲ್ಲಿ ಏ.6 ರಂದು ಹನುಮಾನ ಜಯಂತ್ಯೋತ್ಸವ ನಿಮಿತ್ಯವಾಗಿ ಏ.6 ರಂದು ಸಾಯಂಕಾಲ 6.38ಕ್ಕೆ 34ನೇ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 6.19 ಗಂಟೆಗೆ ಹನುಮಾನ ದೇವರ ತೊಟ್ಟಿಲು ಕಾರ್ಯಕ್ರಮ, ನಂತರ ಅಭಿಷೇಕ ಕಾರ್ಯಕ್ರಮ, ತದನಂತರ 10 ಗಂಟೆಗೆ ಭಕ್ತರಿಗೆ ಪ್ರಸಾದ ವಿತರಣೆ, 6.38 ಗಂಟೆಗೆ ವಿವಿಧ ಮಠಾಧೀಶರು ಮತ್ತು ಭಕ್ತ ಜನಸಾಗರದ ಮಧ್ಯೆ ನಂದಿಕೋಲ ಕುಣಿತ, ಪಲ್ಲಕ್ಕಿ ಉತ್ಸವ, ಪುರವಂತಿಕೆ, ಡೊಳ್ಳು, ಭಾಜಾ ಭಜಂತ್ರಿ, ಹಲಿಗೆ, ಬ್ಯಾಂಡ್ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ರಥೋತ್ಸವ ಜರುಗಲಿದೆ.
ಏ.5 ರಂದು ರಾತ್ರಿ ವಿವಿಧ ಕಲಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘ ಹಾಗೂ ಶ್ರೀ ಜೈಗಂಗಾ ಹನುಮಾನ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೂಡಿ, ಪ್ರಧಾನ ಕಾರ್ಯದರ್ಶಿ ಅನೀಲ ಕೂಡಿ ತಿಳಿಸಿದ್ದಾರೆ