ಹನುಮಾನ ಜಯಂತಿಯಂಗವಾಗಿ ರಥೋತ್ಸವ

ಕಲಬುರಗಿ: ಎ.7:ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘ ಹಾಗೂ ಶ್ರೀ ಜೈ ಗಂಗಾ ಹನುಮಾನ ಜಾತ್ರಾ ಉತ್ಸವ ಸಮಿತಿ ವತಿಯಿಂದ ಬ್ರಹ್ಮಪೂರ ಗಂಗಾನಗರದಲ್ಲಿ ಶ್ರೀ ಹನುಮಾನ ಜಯಂತ್ಯೋತ್ಸವ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಥೋತ್ಸವ ಕಾರ್ಯಕ್ರಮ ಜರುಗಿತು.
ಶ್ರೀ ವೀರಮಹಾಂತ ಶಿವಾಚಾರ್ಯರು, ಶ್ರೀ ಕೋ ತಲಪ್ಪ ಮುತ್ಯಾ, ದತ್ತಾತ್ರೇಯ ಪಾಟೀಲ ರೇವೂರ, ಚಂದು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಅನುಪಮ ಕಮಕನೂರ, ಗುರುರಾಜ ಪಟ್ಟಣ, ರಮೇಶ ನಾಟೀಕಾರ, ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಯ್ ಕೂಡಿ, ಉಪಾಧ್ಯಕ್ಷರಾದ ನಟರಾಜ ಬಿ.ಕಟ್ಟಿಮನಿ, ಅನೀಲ ಎನ್.ಕೂಡಿ, ಪ್ರಧಾನ ಕಾರ್ಯದರ್ಶಿ ಅಶೋಕ ಎಸ್. ಬಿದನೂರ, ಸಹ ಕಾರ್ಯದರ್ಶಿ ಶರಣು ಎಸ್. ಕವಲಗಿ, ಖಜಾಂಚಿ ಬಸವರಾಜ ಬಳೂರಗೆ, ಸಂಘಟನಾ ಕಾರ್ಯದರ್ಶಿ ಉಮೇಶ ಹದಗಲ, ಸಲಹಾ ಸಮಿತಿಯ ರಾಯಪ್ಪ ಹೊನಗುಂಟಿ, ಶಾಂತಪ್ಪ ಕೂಡಿ, ವಿಜಯಕುಮಾರ ಹಡಗಲ, ದತ್ತು ಹೊನ್ನಳ್ಳಿ, ಮಲ್ಲಿಕಾರ್ಜುನ ಮರತೂರ, ಸದಸ್ಯರಾದ ಶ್ರೀಕಾಂತ ಆಲೂರ, ಉದಯಕುಮಾರ ಹೋನಗುಂಟಿ, ಬಾಬಾ ಕೂಡಿ, ಅರವಿಂದ ಕೂಡಿ, ಚಿದಾನಂದ ಹೋನಗುಂಟಿ, ಸದಾಶಿವ ಹಳ್ಳಿ, ಸಂತೋಷ ಹುಳಗೇರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು.