ಹನುಮಾನ ಚಾಲೀಸಾ ಪಠಣ ಮಾಡಿದ ಕೇಂದ್ರ ಸಚಿವ ಭಗವಂತ ಖೂಬಾ

ಬೀದರ:ಮೇ.10:ಕೇಂದ್ರ ಸಚಿವರಾದ ಭಗವಂತ ಖೂಬಾ, ಹಿಂದೂ ಕಾರ್ಯಕರ್ತರು, ಬಜರಂಗ ಬಲಿಯ ಭಕ್ತರೊಂದಿಗೆ ಭಾಲ್ಕಿ ತಾಲೂಕಿನ ಚಾಳಕಾಪೂರ ಗ್ರಾಮದಲ್ಲಿರುವ ಐತಿಹಾಸಿಕ ಹನುಮಾನ ದೇವಸ್ಥಾನದಲ್ಲಿ ಕುಟುಂಬ ಸದಸ್ಯರೊಂದಿಗೆ, ಹಿಂದೂ ಕಾರ್ಯಕರ್ತರೊಂದಿಗೆ ಮತ್ತು ಬಜರಂಗ ಬಲಿಯ ಭಕ್ತರೊಂದಿಗೆ ಸೇರಿ, ಕರ್ನಾಟಕದ 7 ಕೋಟಿ ಜನತೆಯ ಸುರಕ್ಷತೆ, ಅಭಯ, ನೆಮ್ಮದಿ, ಶಾಂತಿ, ವಿಕಾಸದ ಸಂಕಲ್ಪದೊಂದಿಗೆ ಬಜರಂಗ ಬಲಿಯ ವಿಶೇಷ ಪೂಜೆಯನ್ನು ನೇರವೆರಿಸಿ, ಹನುಮಾನ ಚಾಲೀಸ ಪಠಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು ಜಬರಂಗ ದಳವನ್ನು ಯಾವೂದೇ ರಾಜಕೀಯ ಪಕ್ಷದಿಂದಲು, ನಾಯಕನಿಂದಲೂ ಬ್ಯಾನ್ ಮಾಡಲು ಸಾಧ್ಯವಿಲ್ಲ ಇದೊಂದು ಮುರ್ಖತನದ ವಿಚಾರವಾಗಿದೆ. ರಾಜ್ಯದ ಜನತೆ ನಾಳೆ ಮತದಾನ ಮಾಡುವ ಮೂಲಕ ಉತ್ತರ ನೀಡುತ್ತಾರೆ, ಇದರ ಪರಿಣಾಮ ಮೇ. 13ಕ್ಕೆ ಬ್ಯಾನ್ ಮಾಡುವ ಎಲ್ಲರಿಗೂ ಅರ್ಥವಾಗುತ್ತದೆ, ಇವರೆಲ್ಲರ ಮೇಲೆ ಬಜರಂಗ ಬಲಿಯ ಗದಾಪ್ರಹಾರವಾಗಲಿದೆ.

ಮತ್ತು ನಮ್ಮ ಐತಿಹಾಸಿಕ ವಿಚಾರಧಾರೆಗಳು ಮತ್ತು ಸಂಸ್ಕøತಿಯನ್ನು ಭಾರತದ ಪ್ರಜೆಗಳು ಬಲ್ಲವರಾಗಿದ್ದಾರೆ, ನಮ್ಮ ಸಂಸ್ಕøತಿಯ ಪ್ರತಿಕ ರಾಮಭಕ್ತ ಹನುಮನಾಗಿದ್ದು, ಭಕ್ತರು ಹೇಗಿರಬೇಕು, ಹನುಮಂತನಾಗಿರಬೇಕೆಂದು ಪೌರಾಣಿಕದಲ್ಲಿ ಉಲ್ಲೇಖವಾಗಿದೆ, ಇದನ್ನು ನಮ್ಮ ಪ್ರಜೆಗಳು ಅರಿತಿದ್ದಾರೆ. ನಮ್ಮ ಯುವಕರು ಮತ್ತು ಜನತೆ ಹನುಮಂತನ ಶಕ್ತಿ ಹಾಗೂ ಭಕ್ತಿಯ ಪ್ರೇರಣೆಯೊಂದಿಗೆ ಜೀವನದಲ್ಲಿ ಮುನ್ನುಗ್ಗಬೇಕೆಂದು ಜನತೆಗೆ ಕರೆಕೊಟ್ಟರು.

ಅಲ್ಪಸಂಖ್ಯಾತರನ್ನು ಒಲೈಸುವವರು, ಲಿಂಗಾಯತರನ್ನು ಹಾಗೂ ಬಹುಸಂಖ್ಯಾತರನ್ನು ಕಡೆಗಣಿಸುವವರು ಕಾಂಗ್ರೇಸ್ಸಿಗರು ಕೇವಲ ಅಧಿಕಾರಕ್ಕೆ ಬಂದರೆ ಸಾಕು ಎನ್ನುವ ಮನಸ್ಥಿತಿ ಕಾಂಗ್ರೇಸ್ಸನವರದ್ದು.

ಆದರೆ ಸಬಕಾ ಸಾಥ್ ಸಬಕಾ ವಿಕಾಸ್ ನೀತಿಯಲ್ಲಿ, ಸಂವಿಧಾನದ ಆಶಯದಂತೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ, ನಾವೆಂದೂ ಒಲೈಕೆ ರಾಜಕಾರಣ ಮಾಡಲ್ಲ ಎಂದು ತಿಳಿಸಿದರು.

ಗೋಮಾಂಸವನ್ನು ವ್ಯಾಪಾರ ಮಾಡಲು ಮುಕ್ತ ಅವಕಾಶ ನೀಡುವುದಾಗಿ ಹೇಳಿಕೆ ನೀಡಿರುವ ಜೆ.ಡಿ.ಎಸ್. ರಾಜ್ಯಾಧ್ಯಕ್ಷರ ಮಾತಿಗೆ ಸಂದಿಸಿದ ಸಚಿವರು, ಜೆ.ಡಿ.ಎಸ್.ರಾಜ್ಯಾಧ್ಯಕ್ಷರ ತಲೆಕೆಟ್ಟಿದೆ, ಈಗಾಗಲೆ ನಮ್ಮ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ, ಅಂತಹದರಲ್ಲಿ ಇವರುಗಳ ಹೇಳಿಕೆ ನಾಚಕೆಗೇಡಿತನ, ಇವರೆಲ್ಲರಿಗೂ ಗೋಮಾತೆಯ ಶಾಪ ತಟ್ಟಲಿದೆ ಹಾಗೂ ಇವರೆಂದು ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವರು ಜೆ.ಡಿ.ಎಸ್. ರಾಜ್ಯಾಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಿ.ಕೆ.ಸಿದ್ರಾಮ, ಅಣೆಪ್ಪ ಖಾನಾಪೂರೆ, ಪ್ರಶಾಂತ ವಡಗೀರೆ, ವಿಶ್ವನಾಥ ಚಳಕಾಪೂರ, ಬಾಬುರಾವ ಕುಲಕರ್ಣಿ, ಚನ್ನಬಸಪ್ಪ, ಕೃಷ್ಣಕುಮಾರ್ ಎ.ಎಲ್. ಮತ್ತಿತ್ತರು ಉಪಸ್ಥಿತರಿದ್ದರು.