ಹನುಮಾನ್ ನಗರದ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ಕಂಬಗಳು

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಸೆ 25 : ಇಲ್ಲಿನ ವಿಶಾಲನಗರದಿಂದ ಹನುಮಾನ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತಿರುವಿನಲ್ಲಿರುವ ಈ ವಿದ್ಯುತ್ ಕಂಬಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಸಾಮಾನ್ಯವಾಗಿ ಅಪಾಯ  ವಿದ್ಯುತ್ ಕಂಬಗಳುನ್ನು ಮುಟ್ಟಬೇಡಿ ಎಂದು ಹಾಕಿರುತ್ತದೆ. ಆದರೆ ಅಂತಹ ಬರಹ ಇಲ್ಲದಿದ್ದರೂ ರಸ್ತೆಯಲ್ಲಿರುವ ಈ ಕಂಬಗಳು ಅನೇಕ ವಾಹನ ಸವಾರರ ಜೀವನಕ್ಕೆ ಕಂಟಕ ತರುವಂತಿವೆ.
ಈ‌ ಮೊದಲು ಇಲ್ಲಿ ಬಯಲು ಜಾಗ  ಇತ್ತು ಆಗ ವಾಹನಗಳು‌ ಮತ್ತು ಜನರು ಅದರ ಮೂಲಕ ಓಡಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಬಯಲು ಜಾಗವನ್ನು ಮುಚ್ಚಲಾಗಿದೆ. ಇದರಿಂದ ಈಗಾಗಲೇ ಕಿರಿದಾದ ರಸ್ತೆಯಲ್ಲಿ ಅವೈಜ್ಣಾನಿಕವಾಗಿ ನೆಟ್ಟಿರುವ ಈ ವಿದ್ಯುತ್ ಕಂಬಗಳು ಅಪಾಯವನ್ನು ತರುತ್ತಿವೆ.
ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದ್ದು. ರಾತ್ರಿವೇಳಿ ವೇಗವಾಗಿ‌ ಬರುವ ಬೈಕ್ ಸವಾರರು  ಡಿಕ್ಕಿಹೊಡೆದು ಗಾಯಗೊಂಡಿದ್ದಾರೆ.
ಅದಕ್ಕಾಗಿ ಇಲ್ಲಿನ ಜನತೆ ಇವುಗಳು ಸೂಕ್ತ ರೀತಿಯಲ್ಲಿ ಸ್ಥಾಳಾಂತರಿಸಬೇಕು ಎಂದು ಕೋರಿದ್ದಾರೆ.
ಯಾರದ್ದೋ ಅನುಕೂಲಕ್ಕೆ ರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬ ನೆಟ್ಟಿರುವ ಜೆಸ್ಕಾಂ ಸಿಬ್ಬಂದಿ ಬಳಿ ‌ಕೂಡಲೇ ಸರಿಪಡಿಸದಿದ್ದರೆ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.