ಹನುಮಾನ್ ಜಯಂತಿ:ವಿಜ್ರಂಬಣೆಯಿಂದ ಆಚರಿಸಿದ ಭಕ್ತರು

ರಾಯಚೂರು,ಏ.೦೬-
ರಾಮ ಭಕ್ತ, ವಾಯುಪುತ್ರ, ಕೇಸರಿ ನಂದನ, ಅಖಂಡ ಭಕ್ತಿಯ ಸಂಕೇತವಾಗಿರುವ ಹನುಮಾನ್ ಜಯಂತಿಯನ್ನು ಮಾನ್ವಿ ತಾಲೂಕಿನ ಅಮರಾವತಿ ಗ್ರಾಮದ ಭಕ್ತರು ವಿಜ್ರಂಬಣೆಯಿಂದ ಆಚರಿಸಿದರು.
ಇಂದು ಮುಂಜಾನೆ ನಡೆದ ಹನುಮಾನ್ ಜಯಂತಿ ದಿನ ಊರಿನ ಮಹಿಳೆಯರು ಕುಂಭ ಕಳಸಗಳೊಂದಿಗೆ ಡೊಳ್ಳು ಸಮೇತ ಆಂಜನೇಯ ದೇವಸ್ಥಾನದಿಂದ ಹಳ್ಳದ ವರೆಗೆ ಅಂಜಿನಯ್ಯ ಸ್ವಾಮಿಯನ್ನು ಭಾವಚಿತ್ರವನ್ನು ಮೆರವಣಿಗೆ ಮಾಡಿದರು.
ಮುಂಜಾನೆ ಹನುಮಂತ ದೇವರಿಗೆ ಸಕಲ ಪುಜೆಗಳನ್ನು ಗ್ರಾಮದ ದೇವಸ್ಥಾನದ ಪೂಜಾರಿ ಪರಪ್ಪ ಅವರ ನೇತೃತ್ವದಲ್ಲಿ ಸಂಪೂರ್ಣ ಯಶಸ್ವಿಯಾಗಿ ಪೂಜೆಗಳು ಜರುಗಿದವು.
ಊರಿನ ಭಕ್ತರು ಉತ್ಸಾಹದಿಂದ ಆಚರಣೆಯಲ್ಲಿ ಪಾಲ್ಗೊಂಡಿದ್ದರು,ಅಮರಾವತಿ ಗ್ರಾಮದಲ್ಲಿನ ಯುವಕರ ಡೊಳ್ಳು ಕುಣಿತ ಯಶಸ್ವಿಯಾಯಿತು, ಡೊಳ್ಳು ಕುಣಿತದಲ್ಲಿ
ಕರಮಂಚಾ, ಸಂದೀಪ್, ಶರಣಬಸವ, ಮಲ್ಲಿಕಾರ್ಜುನ, ಬೀರಪ್ಪ, ಬೀರಪ್ಪ. ಬಿ ಹನುಮೇಶ,ಪಾಲ್ಗೊಂಡಿದ್ದರು.