ಹನುಮಾನ್ ಚಾಲಿಸಕ್ಕೆ ವಿಜಯ್ ಪ್ರಕಾಶ್ ಧ್ವನಿ

ಕೋಟ್ಯಾಂತರ ಜನ ಭಾರತೀಯರು ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠೆ ಸುಸಮಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ – ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಿದೆ.

ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮೂಡಿಬಂದಿರುವ ಹನುಮಾನ್ ಚಾಲಿಸಾ ವನ್ನು ಭಕ್ತಿ ಭಾವದ ಹೊನಲಿಗೆ ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಭಕ್ತಿಪರವಶರಾಗಿ ಹಾಡಿದ್ದಾರೆ.

ವೆಂಕಟೇಶ್ ಉತ್ತರಹಳ್ಳಿ ನಿರ್ಮಾಣ ಮಾಡಿದ್ದು  ಲೋಕಿ ತವಸ್ಯ ಸಂಗೀತ ನೀಡಿದ್ದಾರೆ. ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಹನುಮಾನ್ ಚಾಲಿಸವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಒಂದು ಆಲ್ಬಂ ತಯಾರಿಸಲಾಗಿದೆ.