ಹನುಮನಹಳ್ಳಿಯಲ್ಲಿ ರೈತ ದಿನಾಚರಣೆ

ಕೊಟ್ಟೂರು ಡಿ 23 : ರೈತರು ಕೃಷಿ ಮತ್ತು ಇತರ ಇಲಾಖೆಗಳು ಕೊಡಮಾಡಿರುವ ಸವಲತ್ತುಗಳನ್ನು ಬಳಸಿಕೊಂಡು, ಕಡಿಮೆ ನೀರು ಬಳಸಿ, ವಿಜ್ಞಾನಿಗಳ ಸಲಹೆಯಂತೆ ತಾಂತ್ರಿಕ ಬೇಸಾಯ ಮಾಡಲು ಮುಂದಾಗಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿ ಸ್ಯಾಮಸುಂದರ್ ‌ ತಿಳಿಸಿದರು .ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರೈತ ದಿನಾಚರಣೆಯಂದು ರೈತರ ಕಷ್ಟಗಳನ್ನು ನೆನೆದು ಅವರಿಗೆ ಬೆನ್ನೆಲುಬಾಗಿ ನಿಂತು ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಹಗರಿಕೃಷಿ ವಿಜ್ಞಾನ ಕೇಂದ್ರದ ಸುಮಿತ ಮಾತನಾಡಿ, ‘ರೈತ ದಿನಾಚರಣೆಯ ಮಹತ್ವ ಹಾಗೂ ಈ ದಿನಾಚರಣೆಯ ಬಗ್ಗೆ ವಿವರಿಸಿದರು. ತಿಮ್ಮಣ್ಣ, ಕೊಟ್ರೇಶ ಸೇರಿದಂತೆ ಆನೇಕರಿದ್ದರು.