ಹನುಮನದೊಡ್ಡಿ: ಬಿದಿನಾಯಿ ದಾಳಿ ೨೦ ಕುರಿ ಸಾವು

ರಾಯಚೂರು,ಏ.೦೪, ಬೀದಿ ನಾಯಿಗಳು
ದಾಳಿ ಮಾಡಿದ್ದರಿಂದ ೨೦ಕ್ಕೂ ಹೆಚ್ಚು ಕುರಿ ಮತ್ತು ಮರಿಗಳು ಮೃತಪಟ್ಟಿರುವ ಘಟನೆ ರವಿವಾರ ತಾಲೂಕಿನ ಹನಮನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಹನಮನದೊಡ್ಡಿ ಗ್ರಾಮದ ಹೊರವಲಯ ತಾಯಪ್ಪ ಎಂಬುವವರ ಹೊಲದಲ್ಲಿ ಕುರಿ
ಹಿಂಡಿನ ಬಲೆಯಲ್ಲಿ ೨೦ ಕ್ಕೂ ಹೆಚ್ಚು ಕುರಿಗಳನ್ನು ನಿಲ್ಲಿಸಲಾಗಿತ್ತು. ಕುರಿಗಳನ್ನು ನೋಡಿದ ಬಿದಿನಾಯಿಗಳು ಏಕಾಏಕಿ ಕುರಿ ಹಿಂಡಿನ ಮೇಲೆ ನುಗ್ಗಿ ದಾಳಿ ಮಾಡಿರುವರಿಂದ ಕುರಿಗಳನ್ನು ಮನಬದಂತೆ ಕಚ್ಚಿ ರಕ್ತ ಇರಿ ಕೊಂದಿವೆ ಎಂದು ಕುರಿಗಾಹಿ ಸೂಗಪ್ಪ ಅವರು ಅಲಳು ತೋಡಿಕೊಂಡರು. ಬಿದಿನಾಯಿಗಳು ಕುರಿಗಳನ್ನು ಅರೆಬರೆಯಿಂದ ತಿಂದು ಹಾಕಿವೆ ಇದರಿಂದ ಕುರಿಗಾಹಿ ಸಂಕಷ್ಟಕ್ಕೆ ಹಿಡಿದಾಗಿದ್ದಾರೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದರು.
ಬಿದಿ ನಾಯಿಗಳ ದಾಳಿಯಿಂದ ೧ ಲಕ್ಷ ಕ್ಕೂ ಹೆಚ್ಚು ಬೆಲೆ ಬಾಳುವ ಕುರಿಗಳು ಮೃತಪಟ್ಟಿದೆ ಎಂದು ಕುರಿಗಾಯಿ ಸಂಬಂಧಿಕರು ತಿಳಿಸಿದರು. ಘಟನೆಯಿಂದಾಗಿ ಕುರಿಗಾಹಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ಕಂಗಾಲಾಗುವಂತೆ ಮಾಡಿದೆ. ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು, ರೈತರ ಹೊಲದಲ್ಲಿ ಕುರಿಗಳನ್ನು ಹಾಕುವುದು ಹಾಗೂ ಕುರಿಗಳ ಮಾರಾಟದಿಂದ ಬಂದ ಆದಾಯದಿಂದ ಕುರಿಗಾಹಿ ಸೂಗಪ್ಪ ಅವರ ಜೀವನ ಸಾಗುತ್ತಿತ್ತು. ಆದರೆ ಬಿದಿನಾಯಿಗಳ ದಾಳಿ ಮಾಡದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ದಿಕ್ಕು ತೋಂಚದಂತೆ ಆಗಿದೆ. ಬೀದಿ ನಾಯಿಗಳನ್ನು ಸೇರೆ ಹಿಡಿಯುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಪಶುಪಾಲನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು