ಹನುಮಂತಪ್ಪ ಆಲ್ಕೋಡ್‌ಗೆ ಕೈ ಟಿಕೆಟ್ ನೀಡಲು ಒತ್ತಾಯ

ಟಿಕೆಟ್ ನೀಡದಿದ್ದರೆ ಮಾದಿಗರ ಬೆಂಬಲ ಇಲ್ಲ
ದೇವದುರ್ಗ,ಏ.೧೩- ಲಿಂಗಸೂಗುರು ಮೀಸಲು ವಿಧಾನ ಸಭಾಕ್ಷೇತ್ರದಿಂದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಎಂದು ಮಾದಿಗ ಮುಖಂಡರು ಹೇಳಿದರು.
ಪಟ್ಟಣದ ಪತ್ರಿಕಾ ಭವನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಹಿಂದೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಆಲ್ಕೋಡ್ ಅವರಿಗೆ ಟಿಕೆಟ್ ನೀಡುವ ವಾಗ್ದಾನ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಟಿಕೆಟ್ ನೀಡುವ ವೇಳೆಗೆ ಕಾಂಗ್ರೆಸ್ ವರಿಷ್ಠರು ಗೊಂದಲ ಮೂಡಿಸುತ್ತಿದ್ದಾರೆ. ಅಸ್ಪೃಶ್ಯರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಒಂದೊಮ್ಮೆ ಆಲ್ಕೋಡ್ ಅವರಿಗೆ ಟಿಕೆಟ್ ಕೊಡದಿದ್ದರೆ ರಾಯಚೂರು ಜಿಲ್ಲೆ ೭ ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡ ಬಾರದು ಎಂದು ಸಮಾಜ ಮತದಾರರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಈಸಂದರ್ಭದಲ್ಲಿ ಬೂದಿಪ್ಪ ಕ್ಯಾದಿಗಿ, ರಮೇಶ ರಾಮನಾಳ, ಕರೆಯಪ್ಪ ಜಾಲಹಳ್ಳಿ, ನಾಗರಾಜ ಜಂಬಲದಿನ್ನಿ, ಪ್ರದೀಪ್ ಅಕ್ಕರಕಿ, ಚಿದಾನಂದ ಮೈಲಾಪೂರು ದೊಡ್ಡಿ ಇದ್ದರು.