ಹನುಮಂತನ ನಿಸ್ವಾರ್ಥ ಭಕ್ತಿಯನ್ನು ರೂಢಿಸಿಕೊಳ್ಳಿ

ಸೈದಾಪುರ:ಸೆ.4:ಸನಾತನ ಸಂಪ್ರದಾಯದಲ್ಲಿ ರಾಮ ಬಂಟ ಹನುಮಂತನಿಗೆ ವಿಶೇಷ ಸ್ಥಾನವಿದೆ. ನಿಸ್ವಾರ್ಥ ಭಕ್ತಿಯಿಂದಲೇ ಎಲ್ಲವನ್ನು ಪಡೆದ ಮಾಹನ್ ಶಕ್ತಿ. ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಶ್ರೀ ಆಶೀರ್ವಚನ ನೀಡಿದರು.
ಪಟ್ಟಣದ ಹೊರ ವಲಯದಲ್ಲಿರುವ ಹುನುಮಂತನ ಬೆಟ್ಟದಲ್ಲಿ ಶ್ರಾವಣ ಮಾಸ ಶನಿವಾರದ ಪ್ರಯುಕ್ತ ದೇವಸ್ಥಾನದ ಭಕ್ತ ಸೇವಕರಿಂದ ಏರ್ಪಡಿಸಿದ ವಿಶೇಷ ಪೂಜೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನಿರ್ಣಾಯಕ ಪಾತ್ರವಹಿಸುವ ಅಂಜನಿ ಪುತ್ರ ಅತ್ಯಂತ ಶಕ್ತಿಶಾಲಿ ದೇವರು ಎಂಬ ನಂಬಿಕೆ ಭಕ್ತರದ್ದು. ಮಾನವನಲ್ಲಿ ಅಗಾದವಾದ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ನೀಡುತ್ತಾನೆ. ಶ್ರವಾಣ ಮಾಸದಲ್ಲಿ ವಿಶೇಷವಾಗಿ ಪೂಜೆ ಮಾಡುವುದರ ಮೂಲಕ ಉತ್ತಮ ಸಾಧನೆ ನಿಮ್ಮದಾಗಲಿ ಎಂದು ತಿಳಿಸಿದರು.
ಆಚಿಜನೇಯನನ್ನು ವಿಳ್ಯದಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ವಿಶೇಷ ಪೂಜೆ ಕೈಂಕರ್ಯಗಳು ಜರಗಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತು.
ದೇವಸ್ಥಾನದ ಅರ್ಚಕ ಶಂಕರಲಿಂಗಯ್ಯ ಸ್ವಾಮಿ, ಯೋಗೇಶ ಕುಮಾರ ದೋಖ, ಆರ್ಯ ವೈಶ್ಯ ಮಹಾಸಭಾ ನಿರ್ದೇಶಕ ರಾಘವೇಂದ್ರ ಬಾದಾಮಿ, ರಾಜೇಶ ಉಡಪಿ, ಗುರುನಾಥರೆಡ್ಡಿಗೌಡ, ಓಂಕಾರ ತಿವಾರಿ, ಕಿರಾಣ ಕುಮಾರ ಶಾ, ಸಿದ್ದು ಗೌಡ ಸಾವೂರು, ಸುರೇಶ ಆನಂಪಲ್ಲಿ, ನರಪತಸಿಂಗ್, ಗ್ರಾಪಂ ಸದಸ್ಯ ಶರಣಪ್ಪ ಬೈರಂಕೊಂಡಿ, ವಿಶ್ವನಾಥ ಸಾಹುಕಾರ, ಆನಂದ ಮಿರಿಯಾಲ್, ಭಜರಂಗದಳದ ಪ್ರಮುಖ ಚಂದ್ರು ವಾಡಿ, ಶಿವು ಸಾವೂರು, ಅವಿನಾಶ ಮನ್ನೆ, ದೀಪಕ್ ದೇವ್, ಅಂಜನೇಯ ಕಲಾಲ್, ನಾಗರಾಜ ನಾಯಕ್ ಸೇರಿದಂತೆ ಅಪಾರ ಭಕ್ತರು ಇದ್ದರು.