ಹನುಮಂತಗೌಡ ಅವರಿಗೆ ಬೆಂಬಲ ನೀಡಿ-ಗದ್ದಿಗೌಡರ

????????????????????????????????????????????????????????????????????????????????????????????????????????????????????????????????????????????????????????????????????????????????????????

ಬಾದಾಮಿ, ನ 3- ಮತಕ್ಷೇತ್ರದ ಪಿಕೆಪಿಎಸ್ ಕ್ಷೇತ್ರ ವತಿಯಿಂದ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸ್ಥಾನಕ್ಕೆ ಸ್ಪಧಿಸಿರುವ ಬಿಜೆಪಿ ಬೆಂಬಲಿತ ಹನಮಂತಗೌಡ ಗೌಡ್ರ ಅವರಿಗೆ ಪಿಕೆಪಿಎಸ್ ಮತದಾರರು ಸಂಪೂರ್ಣ ಬೆಂಬಲ ನೀಡಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಮತದಾರರಲ್ಲಿ ಮನವಿ ಮಾಡಿಕೊಂಡರು.
ಅವರು ನಗರದ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೀಳಿದಿರುವ ಹನಮಂತಗೌಡ ಗೌಡ್ರ ಅವರ ಗೆಲವು ಖಚಿತವಾಗಿದೆ. ತಾಲೂಕಿನಲ್ಲಿ ನಮ್ಮ ಪಕ್ಷದ ಬೆಂಬಲಿತ ಸದಸ್ಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿ ನಮ್ಮ ಪಕ್ಷ ಘೋಷಿಸಿರುವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ನಾವು ಪಕ್ಷದ ಮುಖಂಡರು ಕೂಡಾ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಾಗಿ ಪ್ರಯತ್ನಿಸುತ್ತಿದ್ದೆವೆ. ಹೀಗಾಗಿ ನಮ್ಮ ಅಭ್ಯರ್ಥಿಯ ಗೆಲವು ಖಚಿತವಾಗಿದೆ ಎಂದು ತಿಳಿಸಿದರು.
ಪಿಕಾರ್ಡ ಬ್ಯಾಂಕ ಅಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿ ನಮ್ಮ ಪಕ್ಷದ ಅಭ್ಯರ್ಥಿ ಹನಮಂತಗೌಡ ಗೌಡ್ರ ಗೆಲವು ಖಚಿತವಾಗಿದೆ. ನಮ್ಮ ತಾಲೂಕಿನಲ್ಲಿ ಬರುವ 51 ಪಿಕೆಪಿಎಸ್‍ಗಳಲ್ಲಿ 35 ಕ್ಕೂ ಅಧಿಕ ಪಿಕೆಪಿಎಸ್ ಮತದಾರರು ನಮ್ಮ ಪಕ್ಷದವರಾಗಿದ್ದು, ಹೀಗಾಗಿ ಅಭ್ಯರ್ಥಿಯ ಗೆಲವು ಸುಲಭವಾಗಿದೆ ಎಂದರು.
ನಮ್ಮಲ್ಲಿ ವ್ಯಕ್ತಿಗಿಂದ ಪಕ್ಷ ದೊಡ್ಡದು ಎಂಬ ಸಿದ್ಧಾಂತವಿದೆ. ಹೀಗಾಗಿ ಪಕ್ಷ ಘೋಷಿಸಿರುವ ಅಭ್ಯರ್ಥಿಗೆ ಎಲ್ಲ ಮತದಾರರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಬಿಜೆಪಿ ತಾಲೂಕಾಧ್ಯಕ್ಷ ಶಿವನಗೌಡ ಸುಂಕದ ಮಾತನಾಡಿ ನಮ್ಮ ಪಕ್ಷದ ಅಭ್ಯರ್ಥಿಗೆ ಬಂಡಾಯದ ಬಿಸಿ ತಟ್ಟಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಅಭ್ಯರ್ಥಿ ಹನಮಂತಗೌಡ ಗೌಡ್ರ ಮತದಾರರಲ್ಲಿ ಮತ ನೀಡುವಂತೆ ಮನವಿ ಮಾಡಿಕೊಂಡರು.