ಹನಸಿ ಗ್ರಾ ಪಂ ಗೆ ಅಧ್ಯಕ್ಷರಾಗಿ ಗಂಗಾಧರಯ್ಯ, ಉಪಾಧ್ಯಕ್ಷೆಯಾಗಿ ನಿಂಗಮ್ಮ ಆಯ್ಕೆ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಅ.15 ತಾಲೂಕಿನ ಹನಸಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಎಎಂ  ಗಂಗಾಧರಯ್ಯ , ಉಪಾಧ್ಯಕ್ಷರಾಗಿ ಜೆ. ನಿಂಗಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ತಿಳಿಸಿದ್ದಾರೆ .
 ಒಟ್ಟು 17 ಸದಸ್ಯರಿದ್ದು ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಗಂಗಾಧರಯ್ಯ ಕೆ ಶಕುಂತಲಮ್ಮ ನಾಮಪತ್ರ ಸಲ್ಲಿಸಿದ್ದರು. ಕೆ ಶಕುಂತಲಮ್ಮ 6 ಮತ ಪಡೆದು ಪರಾಭವ ಗೊಂಡರೆ, 10 ಮತಗಳನ್ನು ಗಳಿಸುವ ಮೂಲಕ ಗಂಗಾಧರಯ್ಯ  ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷ ಸ್ಥಾನಕ್ಕೆ ಜೆ. ನಿಂಗಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು ಎಂದರು.
 ಈ ಸಂದರ್ಭದಲ್ಲಿಗ್ರಾ ಪಂ ಸದಸ್ಯರಾದ ಕೆ ಗೋಣಿ ಬಸಪ್ಪ ಯುಬಿ ಕೊಟ್ರೇಶ್ ಹೆಚ್. ಚಂದ್ರಪ್ಪ ಡಿ ಕೃಷ್ಣ ನಾಯ್ಕ್ ಕೆ.ಗೋಣಿಬಸಪ್ಪ, ಯು ವಿಜಯಲಕ್ಷ್ಮಿ ಎನ್ ಹಸನ್ ಷರೀಫ್, ಸಿ.  ದುರ್ಗಮ್ಮ ವೀರೇಶ್ ಎಲ್ಲಮ್ಮ ಶಶಿಕಲಾ ಪಿಕ್ಲಿಬಾಯಿ ಗಂಗಾ ನಾಯ್ಕ್ , ಚೆನ್ನಮ್ಮ ಶಾರದಮ್ಮ ಇದ್ದರು