ಹದಿಹರೆಯದ ಯುವತಿಯರಿಂದ ಬಿಜೆಪಿ ಮತಯಾಚನೆ

ಗಬ್ಬೂರು,ಮೇ.೦೧- ಕಾರ್ಯಕರ್ತರೆಲ್ಲ ಒಗ್ಗೂಡಿ ದೇವದುರ್ಗ ವಿಧಾನಸಭಾ ಕ್ಷೇತ್ರದ ಕೆ.ಶಿವನಗೌಡ ನಾಯಕ ಅವರ ಗೆಲುವಿಗಾಗಿ ಭಾನುವಾರ ಸಾಯಂಕಾಲ ಗಬ್ಬೂರಿನಲ್ಲಿ ಪ್ರತಿ ಮನೆ ಮನೆಗೆ ಹದಿಹರೆಯದ ಯುವತಿಯರಿಂದ ಬಿಜೆಪಿ ಪಕ್ಷದಿಂದ ಭರ್ಜರಿ ಕೆಎಸ್‌ಎನ್ ಪರವಾಗಿ ಮತಯಾಚನೆ ಮಾಡಿದರು.
ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಉತ್ತಮ ನೆಲೆ ಇದೆ ಎಂದರು.
ಪ್ರತಿ ಗ್ರಾಮಗಳಲ್ಲಿ ಅಭ್ಯರ್ಥಿ ಪರ ಮತಯಾಚಿಸಲಾಗುವುದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.ಇದನ್ನು ಮನೆ ಮನೆಗೂ ತಲುಪಲು ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದರು.
ದೇವದುರ್ಗದಲ್ಲಿ ಪ್ರಭಾವಿ ನಾಯಕ ಕೆ.ಶಿವನಗೌಡ ಕಣದಲ್ಲಿದ್ದು ಈ ಬಾರಿ ದೇವದುರ್ಗದ ಜನರು ಅವರ ಕೈಹಿಡಿಯಲಿದ್ದಾರೆ.ತಾಲೂಕಿಯಾದ್ಯಂತ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಬಿಜೆಪಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.