ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ನಿಮಿತ್ತ ಆರೋಗ್ಯ ತಪಾಸಣೆ

ವಿಜಯಪುರ, ಫೆ.14: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳು ಆರೋಗ್ಯ ವಿಭಾಗ ಇವರ ಸಹಯೋಗದಿಂದ ನಮ್ಮ ಸರಕಾರಿ ಪಾಲಿಟೆಕ್ನಿಕ್ ಹಾಗೂ ಯುವರೆಡ್ ಕ್ರಾಸ್ ಘಟಕದಿಂದ ಇತ್ತೀಚೆಗೆ ಪಾಲಿಟೆಕ್ನಿಕ್ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ತ್ಯ ಕಾರ್ಯಕ್ರಮದಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಜರುಗಿತು.
ಅರೋಗ್ಯ ತಪಾಸಣೆ ಶಿಬಿರದಲ್ಲಿ ಆರ್.ಕೆ.ಎಸ್.ಕೆ.ತಂಡದಿಂದ ಸಂಸ್ಥೆಯ 780 ವಿದ್ಯಾರ್ಥಿಗಳಿಗೆ ಹೆಚ್‍ಬಿ ತಪಾಸಣೆ ನಡೆಸಲಾಯಿತು. 34 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಭಾಗವಹಿಸಿದ್ದ 780 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಕಾರ್ಯಕ್ರಮದಲ್ಲಿ ಆಯುಷ್‍ಮಾನ ಭಾರತ ಕಾರ್ಡ ಮಾಡಿಸಲಾಯಿತು.
ಕಾರ್ಯಕ್ರಮವನ್ನು ಆರ್.ಸಿ.ಹೆಚ್ ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮನೋರೋಗ ತಜ್ಞ ಡಾ.ಮಂಜುನಾಥ ಮಸಳಿ, ರಕ್ತ ಕೇಂದ್ರ ವೈದ್ಯಾಧಿಕಾರಿ ಡಾ.ಸುಮಾ ಮಮದಾಪುರ, ಆರ್.ಕೆ.ಎಸ್.ಕೆ. ಜಿಲ್ಲಾ ಸಂಯೋಜಕಿ ಸಾವಿತ್ರಿ ಹಿಪ್ಪರಗಿ, ಡಾ.ಮಂಜುನಾಥ ಪೋಳ, ಯುವರೆಡ್ ಕ್ರಾಸ್ ಸಂಸ್ಥೆಯ ಘಟಕದ ಕಾರ್ಯಕ್ರಮಾಧಿಕಾರಿ ಸಂತೋಷ ರಾಠೋಡ ಉಪಸ್ಥಿತರಿದ್ದರು.