ಹದವಾದ ಮಳೆ; ಬಿತ್ತನೆಗೆ ಮುಂದಾದ ರೈತರು

ಜಗಳೂರು.ಮೇ.೨೭;  ಮುಂಗಾರು ಹಂಗಾಮಿಗೆ ಒಳ್ಳೆ ಮಳೆಯಾಗುವ ಮುನ್ಸೂಚನೆಯೊಂದಿಗೆ ತಾಲೂಕಿನಲ್ಲಿ ರೈತರು ಭೂಮಿ ಹದ ಮಾಡುವ ಕಾರ್ಯದಲ್ಲಿ  ನಿರತರಾಗಿದ್ದಾರೆ. ತಾಲೂಕಿನ ಕಸಬಾ ಹೋಬಳಿ ಮತ್ತು ಬಿಳಿಚೋಡು, ಸೊಕ್ಕೆ ಹೋಬಳಿ ಗಳಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಹರ್ಷಗೊಂಡ  ರೈತರು ತಮ್ಮ ಜಮೀನುಗಳನ್ನು ವ್ಯವಸಾಯ ಮಾಡಿಕೊಂಡು ಸ್ವಲ್ಪ ಪ್ರಮಾಣದ ಮಳೆ ಬಂದರೆ  ಬಿತ್ತಲು ಕಾಯುತ್ತಿದ್ದಾರೆ ಜಗಳೂರು ತಾಲೂಕಿನ ಮರೆನಹಳ್ಳಿ ಗ್ರಾಮದ ರೈತರಾದ ಪಾಪಲಿಂಗಪ್ಪ ತಮ್ಮ ಜಮೀನಿನಲ್ಲಿ ಈರುಳ್ಳಿ ಮತ್ತು ಮೆಕ್ಕೆಜೋಳ ಶೇಂಗಾ ಬಿತ್ತನೆ ಮಾಡಲು ಮುಂಜಾಗ್ರತೆಯಾಗಿ ವ್ಯವಸಾಯ ಮಾಡಿ    ಮಳೆಗಾಗಿ ಕಾಯುತ್ತಿದ್ದಾರೆ ನಮ್ಮ ಜಗಳೂರು ತಾಲೂಕಿನಲ್ಲಿ ವಾಡಿಕೆಯಂತೆ ಮಳೆ ಬೀಳುತ್ತಿದೆ ರೈತರು ಭಯಪಡುವ ಅಗತ್ಯವಿಲ್ಲ ಯಾವುದೇ ರೀತಿಯ ಒಂದೇ ಬೆಳೆಯನ್ನು ರೈತರು ಹಾಕಬಾರದು ಶೇಂಗಾ ತೊಗರಿ ಹತ್ತಿ ಹವರೇ ನವಣೆ.ರಾಗಿ ಇನ್ನು ಮುಂತಾದ ಸಿರಿಧಾನ್ಯಗಳನ್ನು ಬೆಳೆಗಳನ್ನು ಬೆಳೆಯಬೇಕು ಆಗ ಮಾತ್ರ  ರೈತ ಸಾವಲಂಬಿ ಆಗುತ್ತಾನೆ  ಒಂದು ವೇಳೆ ಒಂದೇ ಬೆಳೆಯನ್ನು ಬೆಳೆಯುವುದರಿಂದ ರೈತನು ಮತ್ತೆ ಸಾಲಗಾರ
ನಾಗುತ್ತಾನೆ  ರೈತರು ಬಿತ್ತನೆ ಮಾಡುವ ಮುಂಚೆ ಭೂಮಿಗೆ ಪೋಟಸಿಯಂ ಗೊಬ್ಬರ ಒಂದು ಎಕರೆಗೆ 50 ಕೆಜಿ ಮುಂಚಿತವಾಗಿ ಹಾಕಬೇಕು  ಮತ್ತು ರೈತರು ಪ್ರತಿ ಎಕರೆಗೆ ಐದು ಕೆ.ಜಿ.ಯಒಂದು ಪಾಕೆಟ್ ನಂತೆ  ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುವುದು ಅಧಿಕೃತ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬಿತ್ತನೆ ಬೀಜವನ್ನು ಖರೀದಿಸಬೇಕು, ಕಡ್ಡಾಯವಾಗಿ ವರ್ಜಿನಲ್ ಆಧಾರ ಕಾರ್ಡ   ತರಬೇಕು ಎಂದು ಕೃಷಿ ಇಲಾಖೆ  ಸಹಾಯಕ ನಿರ್ದೇಶಕ ಶ್ರೀನಿವಾಸಲು ರೈತರಿಗೆ ಹೇಳಿದರು.