ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಕಲಿಕಾ ಅವಕಾಶ

ಬೆಂಗಳೂರು, ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಮತ್ತು ಪ್ರತಿಯೊಂದು ಮಗುವಿಗೂ ಸಮಾನ ಕಲಿಯುವ ಅವಕಾಶವನ್ನು ಒದಗಿಸಲು ಬೈಜೂಸ್ನ ಟಿ’ಎಲ್ಲರಿಗೂ ಶಿಕ್ಷಣ(ಎಜುಕೇಶನ್ ಫಾರ್ ಆಲ್’) ಉಪಕ್ರಮವು ಬೆಂಗಳೂರಿನ ಎನ್‌ಜಿಒ ರೈಟ್ ಟು ಲಿವ್‌ದೊಂದಿಗೆ ಸಹಯೋಗ ಏರ್ಪಡಿಸಿದೆ.

ಈ ಸಹಯೋಗದ ಮೂಲಕ ಬೈಜುಸ್’ ಮತ್ತು ರೈಟ್ ಟು ಲಿವ್ ಕರ್ನಾಟಕದಾದ್ಯಂತ ಇರುವ ಸರ್ಕಾರೀ ಶಾಲೆಗಳ ಸುಮಾರು ೮೫೦೦ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ-ಚಾಲಿತ ಕಲಿಕೆಯನ್ನು ತರುವ ಗುರಿ ಹೊಂದಿದೆ. ಇದರ ಜೊತೆಗೆ, ಬೈಜುಸ್ ನ ಉದ್ಯೋಗಿಗಳು ಈ ಮಕ್ಕಳಿಗೆ ಅಡಿಪಾಯ ಸಂವಾದನೀಯ ಇಂಗ್ಲಿಷ್ ಕಲಿಸಲು ಸ್ವಪ್ರೇರಣೆಯಿಂದ ಮುಂದೆ ಬಂದಿದ್ದಾರೆ,

, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರೀ ಹೆಣ್ಣುಮಕ್ಕಳ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಈಗಾಗಲೇ ೩೩೮ ಪರವಾನಗಿಗಳನ್ನು ನೀಡಲಾಗಿದೆ. ಕಲಿಕಾ ಕಾರ್ಯಕ್ರಮ ಮತ್ತು ಸ್ವಯಂಸೇವಕರೊಂದಿಗೆ ಮುಖಾಮುಖಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಪ್ರವೇಶಾವಕಾಶ ಒದಗಿಸುತ್ತವೆ. ಈ ಉಪಕ್ರಮಕ್ಕಾಗಿ ೬೫+ ಬೈಜುಸ್ ನ ಉದ್ಯೋಗಿಗಳು, ವಾರದ ಆಧಾರದ ಮೇಲೆ, ೯-೧೫ ವರ್ಷ ವಯಸ್ಸಿನವರಿಗೆ ರಾಜ್ಯಾದ್ಯಂತ ಇರುವ ಹಲವಾರು ಸರ್ಕಾರೀ ಶಾಲೆಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಎಂದು ಸಾಮಾಜಿಕ ಉಪಕ್ರಮಗಳ ವಿಭಾಗದ ಉಪಾಧ್ಯಕ್ಷೆ ಮಾನ್ಸಿ ಕಸ್ಲಿವಾಲ್  ತಿಳಿಸಿದ್ದಾರೆ.