
ಗದಗ,ಮಾ8 : ದೇಶದ ಜನರು ಹಾಗೂ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸೆಕ್ಟರ್ ಅಧಿಕಾರಿ ಸತೀಶ ಬಿಸ್ಲೆ ತಿಳಿಸಿದರು.
ನರಗುಂದ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹದಲಿ ಗ್ರಾಮದ ಮತಗಟ್ಟೆ ಸಂಖ್ಯೆ 115 ರಲ್ಲಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ನೋಂದಣಿಯಾದ ಎಲ್ಲಾ ಮತದಾರರು ಮತದಾನ ವನ್ನು ಮಾಡಬೇಕು ಯುವ ಮತದಾರರು ಹಾಗೂ ವಯೋವೃದ್ಧರು ಯಾವುದೇ ಭಯವಿಲ್ಲದೇ ನಿರ್ಭಿತಿಯಿಂದ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿ.ಡಿ.ಪಿ.ಓ. ಆರ್ ಎಸ್ ಗಂಧದ ಅವರು ಮತ ಚಲಾಯಿಸುವಾಗ ಯಾವುದೇ ಆತಂಕದಿಂದ ಮತದಾನ ಮಾಡುವುದು ಬೇಡ. ನೀವು ಮತದಾನ ಮಾಡಿದ ಗುರುತು ಹಾಗೂ ಚಿಹ್ನೆ ಸರಿಯಾಗಿದೆಯೇ ಇಲ್ಲವೇ ಎಂದು ನೀವು ತಿಳಿಯಲು ನಿಮಗೆ ಮತಗಟ್ಟೆಯಲ್ಲಿ 7 ಸೆಕೆಂಡಗಳ ಕಾಲಾವಕಾಶ ಇದೆ . ಮತ ಚಲಾಯಿಸುವ ಸಮಯದಲ್ಲಿ ನಿಮ್ಮ ಮತಗಟ್ಟೆ ಸಂಖ್ಯೆ ಹಾಗೂ ವಿದ್ಯುನ್ಮಾನ ಮತ ಯಂತ್ರದಲ್ಲಿ ಹಸಿರು ಬಣ್ಣದ ಲೈಟ್ ಉರಿಯುತ್ತಿದೆ ಇಲ್ಲವೆಂದು ವೀಕ್ಷಿಸಿ ಹಾಗೂ ಮತ ಚಲಾಯಿಸಿದ ನಂತರ ಮತ ಯಂತ್ರದಲ್ಲಿ ಕ್ರಮ ಸಂಖ್ಯೆ ಮತ್ತು ಚಿಹ್ನೆ ಎರಡು ನಿಮ್ಮ ಮುಂದೆ ಕಾಣುತ್ತವೆ ಎಂದು ವಿವರವಾಗಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು, ಜನರು ಭಾಗಿಯಾಗಿದ್ದರು.