ಹದಗೆಟ್ಟ ಹಲಕೊಡ -ನಿಡಗುಂದ ರಸ್ತೆ

ಚಿಂಚೋಳಿ,ಸ 6: ತಾಲೂಕಿನ ಹಲಕೊಡ ಗ್ರಾಮದಿಂದ ನಿಡಗುಂದ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ವಾಹನ ಸವಾರರಿಗೆ ಓಡಾಡಲು ಬಹಳಷ್ಟು ತೊಂದರೆ ಆಗುತ್ತಿದೆ.
ಎರಡು ದಿನಗಳ ಸತತ ಮಳೆಯಿಂದ ರಸ್ತೆ ಮೇಲೆ ಸಂಪೂರ್ಣ ನೀರು ನಿಂತಿದ್ದು ಗುಂಡಿ ಯಾವುದು ರಸ್ತೆ ಯಾವುದು ಎಂಬುದು ವಾಹನ ಸವಾರರಿಗೆ ಗೊತ್ತಾಗುತ್ತಿಲ್ಲ.ಇದರಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದವರು ಕೆಲವರು ಈ ರಸ್ತೆಯ ಗುಂಡಿಯಲ್ಲಿ ಬಿದ್ದಿದ್ದು ಸಣ್ಣಪುಟ್ಟ ಗಾಯ ಆಗಿದ್ದು ಇದಕ್ಕೆ ಕಾರಣ ರಸ್ತೆ ತುಂಬಾ ಹದಗೆಟ್ಟಿದ್ದು ಅದರಿಂದ ಕೂಡಲೇ
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಲಕೊಡ ಗ್ರಾಮದಿಂದ ನಿಡಗುಂದ ರಸ್ತೆಯು ಪುನಃ ನಿರ್ಮಾಣ ಮಾಡಿಕೊಡಬೇಕೆಂದು ಹಲಕೊಡ ಮುಖಂಡರಾದ ಭೈನಪ್ಪ ಗುತ್ತೇದಾರ ಆಗ್ರಹಿಸಿದ್ದಾರೆ