ಹದಗೆಟ್ಟ ರಸ್ತೆ: ಮೌನಕ್ಕೆ ಜಾರಿದ ಜನಪ್ರತಿನಿಧಿಗಳು-ನಿರ್ಲಕ್ಷ ತೋರಿದ ಅಧಿಕಾರಿಗಳು

ಬೀದರ್:ಫೆ.3: ತಾಲ್ಲೂಕಿನ ಚಿಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚಿಟ್ಟಾ ಗ್ರಾಮದ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಸುಮಾರು ವರ್ಷಗಳಿಂದ ರಸ್ತೆ ಮಾಡದೆ, ಸಂಪೂರ್ಣವಾಗಿ ರಸ್ತೆಯು ಕಾಲ್ನಡಿಗೆ ದಾರಿ ಆಗಿದೆ. ಇದರಿಂದ ಪರಿಶಿಷ್ಟ ಜಾತಿಯ ಜನಾಂಗಕ್ಕೆ ಪ್ರತಿನಿತ್ಯ ಓಡಾಡಲು ತುಂಬಾ ಕಷ್ಟಕರವಾಗುತ್ತಿದೆ ಎಂದು ಅಲ್ಲಿಯ ನಿವಾಸಿಗಳು ಆಪಾದಿಸಿದ್ದಾರೆ.
ಗಂಗಮ್ಮಾ ಗಂಡ ಘಾಳೇಪ್ಪ ಇವರ ಮನೆಯಿಂದ ತುಳಸಿರಾಮ ತಂದೆ ಶೇಷಪ್ಪ ರವರ ಮನೆಯ ವರೆಗೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಮನೆಯಲ್ಲಿ ಬಳಸಿರುವ ದಿನನಿತ್ಯದ ನೀರು ಹಾಗೂ ಶೌಚಾಲಯದ ನೀರು ರಸ್ತೆಯ ಮೇಲೆ ನಿಂತು, ರಸ್ತೆಯು ಸಂಪೂರ್ಣವಾಗಿ ಗೊಬ್ಬು ವಾಸನೆ ಬರುತ್ತಿದೆ, ಅಲ್ಲದೆ ಅಕ್ಕಪಕ್ಕದ ಚರಂಡಿ ಕೂಡ ಇರುವುದರಿಂದ ಈ ರೀತಿಯ ವಾತಾವರಣದಿಂದ ಅಕ್ಕ ಪಕ್ಕದ ಮನೆಯವರು ಹಾಗೂ ಓಣಿಯ ಜನರು ಭಯಾನಕ ರೋಗಗಳಿಗೆ ತುತ್ತಾಗುತ್ತಿರುವರು ಎಂದು ಅಲ್ಲಿಯ ನಿವಾಸಿ .ಡಿ.ಎಸ್.ಎಫ್.ನ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಅನೀಲಕುಮಾರ ಮಡ್ಡೆ ದೂರಿದ್ದಾರೆ.
ಕಾರಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಲ್ಲಿಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚಿಟ್ಟಾ ಗ್ರಾಮದ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿಯ ಗಂಗಮ್ಮಾ ಗಂಡ ಘಾಳೇಪ್ಪ ಇವರ ಮನೆಯಿಂದ ತುಳಸಿರಾಮ ತಂದೆ ಶೇಷಪ್ಪ ರವರ ಮನೆಯ ವರೆಗೆ ರಸ್ತೆ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಮಡ್ಡೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.